ನಮ್ಮ ರಾಜೀನಾಮೆಯಿಂದ ಅಧಿಕಾರ ಇಲ್ಲದೇ ಕೂತಿದ್ದ ಸಿದ್ದರಾಮಯ್ಯಗೆ ಅಧಿಕಾರ ಸಿಕ್ಕಿದೆ: ಬಿ.ಸಿ.ಪಾಟೀಲ್ - ಅನರ್ಹ ಶಾಸಕ ಬಿ.ಸಿ.ಪಾಟೀಲ್
🎬 Watch Now: Feature Video
ನಾನು ರಾಜೀನಾಮೆ ನೀಡಿದ್ದರಿಂದಲೇ ಅಧಿಕಾರ ಇಲ್ಲದೇ ಕೂತಿದ್ದ ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿತು. ಅವರಿಗೆ ಸರ್ಕಾರಿ ಬಂಗಲೆ, ಕಾರು ಸಿಕ್ಕಿತು ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2008 ರಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಧಿಕಾರ ಇರಲಿಲ್ಲ. ನಮ್ಮ ರಾಜೀನಾಮೆಯಿಂದ ಸರಕಾರಿ ಕಾರು, ಬಂಗಲೆ ಸಿಕ್ಕಿದೆ. ಅಲ್ಲದೇ ನಮ್ಮ ರಾಜೀನಾಮೆಯಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದರು.