ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು - ಮದುವೆಗೆ ತೆರಳುತ್ತಿದ್ದ ಕಾರು ಚಂಬಲ್ ನದಿಗೆ
🎬 Watch Now: Feature Video
ನಿಯಂತ್ರಣ ತಪ್ಪಿದ ಕಾರೊಂದು ಚಂಬಲ್ ನದಿಗೆ ಉರುಳಿಬಿದ್ದು ಮದುಮಗ ಸೇರಿ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ. ನದಿಯಿಂದ ಎಲ್ಲರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರು ನಿಯಂತ್ರಣ ತಪ್ಪಲು ಮತ್ತು ನೀರಿಗೆ ಬೀಳಲು ಕಾರಣವೇನು ಎಂದು ತಿಳಿದುಬಂದಿಲ್ಲ. ಕಾರು ಉಜ್ಜೈನಿ ಕಡೆಗೆ ತೆರಳುತ್ತಿತ್ತು ಎಂದು ಗೊತ್ತಾಗಿದೆ. ಮುಂಜಾನೆ 5 ಗಂಟೆಗೆ ಹೋಟೆಲ್ಲೊಂದರ ಬಳಿ ಚಹಾ ಕುಡಿದು ತಮ್ಮ ಕುಟುಂಬಸ್ಥರೊಡನೆ ಮಾತನಾಡಿದ್ದವರು ಆ ಬಳಿಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Last Updated : Feb 3, 2023, 8:17 PM IST