ಮಾರುಕಟ್ಟೆ ರೌಂಡಪ್: ಜಾಗತಿಕ ಏರಿಳಿತದ ಮಧ್ಯೆ 95 ಅಂಕ ಜಿಗಿದ ಸೆನ್ಸೆಕ್ಸ್
🎬 Watch Now: Feature Video
ಮುಂಬೈ: ಜಾಗತಿಕ ಮಾರುಕಟ್ಟೆಗಳ ಮಿಶ್ರ ಸೂಚನೆಗಳ ಮಧ್ಯೆ ಭಾರತೀಯ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರದ ವಹಿವಾಟಿನಂದು 95 ಅಂಕ ಏರಿಕೆಯಾಗಿ 38,067.93 ಅಂಕಗಳ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 25.15 ಅಂಕ ಹೆಚ್ಚಳವಾಗಿ 11,247.55 ಅಂಕಗಳಿಗೆ ತಲುಪಿತು. ಎಚ್ಡಿಎಫ್ಸಿ ಟ್ವಿನ್ಸ್, ಎಚ್ಯುಎಲ್ ಹಾಗೂ ಐಟಿಸಿ ದಿನದ ವಹಿವಾಟಿನಲ್ಲಿ ಗರಿಷ್ಠ ಲಾಭ ಗಳಿಸಿದವು.