ಆಭರಣ ಅಡ ಇಟ್ಟು ಗಣೇಶ ಮೂರ್ತಿ ತಯಾರಿ: ಭೋಪಾಲ್‌ನಲ್ಲಿ ಶಿಲ್ಪಿಗಳ ಸಂಕಷ್ಟ - ಕೋವಿಡ್ 19

🎬 Watch Now: Feature Video

thumbnail

By

Published : Aug 12, 2020, 5:33 PM IST

ಭೋಪಾಲ್ (ಮಧ್ಯಪ್ರದೇಶ): ಕೋವಿಡ್‌ನಿಂದಾಗಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಜನ ಒಂದೆಡೆ ಸೇರಿ ಹಬ್ಬ, ಹರಿದಿನ ಆಚರಿಸುವುದಕ್ಕೂ ನಿರ್ಬಂಧವಿದೆ. ಪರಿಸ್ಥಿತಿ ಹೀಗಿರುವಾಗ ಈ ಸಲ ಗಣೇಶನ ಉತ್ಸವಕ್ಕೆ ಹಿನ್ನಡೆ ಆಗಲಿದೆ. ದೇಶಾದ್ಯಂತ ಇದು ಸಣ್ಣ-ಪ್ರಮಾಣದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ‘ಗಣೇಶ ಚತುರ್ಥಿ’ ಸಮೀಪಿಸುತ್ತಿದ್ದಂತೆ ಭೋಪಾಲ್‌ನ ಶಿಲ್ಪಿಗಳು ಕೋವಿಡ್​ -19 ಕಾರಣದಿಂದಾಗಿ ಕಡಿಮೆ ಬೇಡಿಕೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಓರ್ವ ಶಿಲ್ಪಿ, 'ನಾವು ಎಲ್ಲಾ ಆಭರಣಗಳನ್ನು ಅಡಮಾನ ಇಟ್ಟಿದ್ದೇವೆ. ಆ ಹಣವನ್ನು ಮೂರ್ತಿ ತಯಾರಿಕೆಗೆ ಖರ್ಚು ಮಾಡಿದ್ದೇವೆ. ಈ ವಿಗ್ರಹಗಳನ್ನು ಮಾರಾಟ ಮಾಡದಿದ್ದರೆ, ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ' ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.