ಉಡುಪಿಯಲ್ಲಿ ತಗ್ಗಿದ ಸ್ವರ್ಣೆಯ ಪ್ರವಾಹ: ನದಿ ಪಾತ್ರದ ಜನತೆ ನಿರಾಳ - Swarna river flood
🎬 Watch Now: Feature Video

ನಗರದ ಸುಮಾರು 40ರಷ್ಟು ಭಾಗವನ್ನು ಪ್ರವಾಹದಲ್ಲಿ ಮುಳುಗಿಸಿದ್ದ ಸ್ವರ್ಣ ನದಿಯ ಪ್ರವಾಹ ಮಟ್ಟ ಕೊಂಚ ಇಳಿಕೆಯಾಗಿದೆ. ಕಳೆದೊಂದು ವಾರದಿಂದ ಉಕ್ಕಿ ಹರಿಯುತ್ತಿದ್ದ ನದಿ ಇದೀಗ ಶಾಂತವಾಗಿದೆ. ಜಿಲ್ಲಾಡಳಿತದ ಪ್ರಕಾರ ಸ್ವರ್ಣ ನದಿಯ ಪ್ರವಾಹದಿಂದಾಗಿ ಸುಮಾರು 67 ಮನೆಗಳಿಗೂ ಹಾನಿಯಾಗಿತ್ತು. ಇದೀಗ ನದಿ ಪಾತ್ರದ ಜನತೆ ನಿಟ್ಟುಸಿರು ಬಿಡುವಂತಾಗಿದ್ದು, ಮಳೆಯಾರ್ಭಟವೂ ಕಡಿಮೆಯಾಗಿದೆ.