ಹಾವನ್ನು ಹಿಡಿದ ಕುಣಿಗಲ್ ಶಾಸಕ ರಂಗನಾಥ್.. ಉರಗಗಳ ರಕ್ಷಣೆ ಕುರಿತು ಜಾಗೃತಿ - ತುಮಕೂರಿನಲ್ಲಿ ಹಾವು ಹಿಡಿದ ಶಾಸಕ ಡಾ. ರಂಗನಾಥ್
🎬 Watch Now: Feature Video

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಶಾಲೆಯೊಂದರಲ್ಲಿ ಅಡಗಿದ್ದ ಕೆರೆ ಹಾವೊಂದನ್ನು ಸ್ನೇಕ್ ಮಹಾಂತೇಶ್ ಎಂಬುವವರು ಸುರಕ್ಷಿತವಾಗಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾವನ್ನು ಹಿಡಿದು ಸಂತಸಪಟ್ಟರು. ಆರಂಭದಲ್ಲಿ ಶಾಸಕರು ಅದನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದರು. ನಂತರ ಕೈಯಲ್ಲಿ ಹಾವು ಹಿಡಿದು, ಹಾವುಗಳ ಕುರಿತು ಜನರಿಗೆ ಅರಿವು ಮೂಡಿಸಿದರು. ಹಾವುಗಳ ರಕ್ಷಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.