thumbnail

By

Published : Feb 27, 2021, 5:47 PM IST

ETV Bharat / Videos

ಪೊಲೀಸರೊಂದಿಗೆ 11 ವರ್ಷ ಸೇವೆ: ಶ್ವಾನಕ್ಕೆ ಅದ್ಧೂರಿ ಬೀಳ್ಕೊಡುಗೆ

ನಾಶಿಕ್(ಮಹಾರಾಷ್ಟ್ರ): ​ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಬಾಂಬ್ ಪತ್ತೆ ದಳದಲ್ಲಿ ಬರೋಬ್ಬರಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸ್ಪೈಕ್ ಹೆಸರಿನ ಶ್ವಾನ ನಿವೃತ್ತಿಯಾಗಿದ್ದು, ಅದಕ್ಕೆ ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿದೆ. ನಾಸಿಕ್ ಬಾಂಬ್​ ಡಿಟೆಕ್ಷನ್​ ಸ್ಕ್ವಾಡ್​ನಲ್ಲಿ 2010 ರಿಂದ ಈ ಶ್ವಾನ ಸೇವೆ ಸಲ್ಲಿಸಿದ್ದು, ಅನೇಕ ಬಾಂಬ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇಂದು ಪೊಲೀಸ್​ ವಾಹನದ ಬಾನೆಟ್ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗಿದ್ದು, ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಲಾಯಿತು. ಜತೆಗೆ ಪೊಲೀಸರು ಚಪ್ಪಾಳೆ ತಟ್ಟಿ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.