ETV Bharat / state

ಪೇಪರ್ ಲೆಸ್ ಆನ್ಲೈನ್ ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥ ಜಾರಿ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ - Paperless Online E Account - PAPERLESS ONLINE E ACCOUNT

ಪೇಪರ್ ಲೆಸ್ ಆನ್ಲೈನ್ ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥವಾಗಿ ಜಾರಿ ಮಾಡಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ONLINE E ACCOUNT DISTRIBUTION  TRIAL BASIS  BBMP  BENGALURU
ಪೇಪರ್ ಲೆಸ್ ಆನ್ಲೈನ್ ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥವಾಗಿ ಜಾರಿ (ETV Bharat)
author img

By ETV Bharat Karnataka Team

Published : Oct 1, 2024, 11:04 AM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲಿಕರಿಗೆ ಪೇಪರ್ ಲೆಸ್ ಹಾಗೂ ಆನ್ಲೈನ್ ಮೂಲಕ ಇ - ಖಾತಾ ವಿತರಣಾ ವ್ಯವಸ್ಥೆಯನ್ನು ಬಿಬಿಎಂಪಿ ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಕ್ಟೋಬರ್​ 1 ರಿಂದ ಸಂಪರ್ಕ ರಹಿತವಾಗಿ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಹಲವು ಮಾನದಂಡಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಯ ಆಧಾರದಲ್ಲಿ ಕರಡು ಇ ಖಾತೆಗಳನ್ನು ಆನ್ಲೈನ್​ನಲ್ಲಿ ಇರಿಸಲಾಗಿರುತ್ತದೆ. ಇದರಿಂದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ -ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಾಖಲೆಗಳು ಹೊಂದಿಕೆಯಾಗದಿದ್ದರೆ ನಿಯಮಾವಳಿಗಳಂತೆ ಅಂತಿಮ ಇ - ಖಾತಾ ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಬೇಕು. ಇ - ಖಾತಾ ವಿತರಿಸದಂತೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಕರಡು ಇ - ಖಾತಾ ರಚಿಸಿದ 7 ದಿನಗಳವರೆಗೆ ಆಕ್ಷೇಪಣೆಗೆ ಅವಧಿ ನಿಗದಿಪಡಿಸಲಾಗಿದೆ. ನಂತರ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಸೇರ್ಪಡೆಗೆ ಮೊದಲು ಗ್ರಾಮ ಪಂಚಾಯಿತಿಯ ಇ -ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಮನವರ್ತೆ ಕಾವಲ್ ಗ್ರಾಮಗಳಲ್ಲಿನ ಸುಮಾರು 2,500 ಸ್ವತ್ತುಗಳಿಗೆ ಪಾಲಿಕೆಯು ಸ್ವಯಂಚಾಲಿತವಾಗಿ ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಅರ್ಜಿ ಸಂಖ್ಯೆ ಹಾಗೂ ಇ - ಖಾತಾಗಳನ್ನು ಸೃಷ್ಟಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿ ಹೊಸ ವ್ಯವಸ್ಥೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿಯು ಲಕ್ಷಾಂತರ ಆಸ್ತಿ ಖಾತೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಇದೀಗ ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೆ ಮುಂದಾಗಿದ್ದೇವೆ. ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆಗಿರುವುದರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸುವ ಮೂಲಕ ಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಆದ್ದರಿಂದ ಬಿಬಿಎಂಪಿ ಅತ್ಯಮೂಲ್ಯ ಸೇವೆ ನೀಡಲು ನಾಗರಿಕರು ಕೂಡ ಸಹಕರಿಸಬೇಕು ಎಂದಿದ್ದಾರೆ.

ಪ್ರಮುಖಾಂಶಗಳು:

  • ಡಿಜಿಟಲೀಕರಣಗೊಂಡ 21ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾ ಹಾಕಲಾಗಿದೆ.
  • ಆಕ್ಷೇಪಣೆ ಸಲ್ಲಿಸಲು 7ದಿನಗಳ ಕಾಲಾವಕಾಶ.
  • ಆನ್‌ಲೈನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಓದಿ: ನಿವೇಶನ ಹಿಂತಿರುಗಿಸುವ ನಿರ್ಧಾರ ನನಗೂ ಅಚ್ಚರಿ ಉಂಟು ಮಾಡಿದೆ: ಪತ್ನಿ ಪತ್ರದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ - Muda Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.