ETV Bharat / state

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಶನಿವಾರ ಒಂದೇ ದಿನ 62 ಸಾವಿರ ಜನ ವೀಕ್ಷಣೆ - LALBAGH FLOWER SHOW

ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ವಾರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿ ವೀಕ್ಷಣೆ ಮಾಡಿದ್ದಾರೆ.

BENGALURU  ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ  LIFE OF MAHARISHI VALMIKI  FLOWER AND FRUIT EXHIBITION
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಶನಿವಾರ 62 ಸಾವಿರ ಮಂದಿಯಿಂದ ವೀಕ್ಷಣೆ (ETV Bharat)
author img

By ETV Bharat Karnataka Team

Published : Jan 26, 2025, 9:22 AM IST

ಬೆಂಗಳೂರು: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ 2025ರ ಅಂಗವಾಗಿ ಆಯೋಜಿಸಿರುವ ಮಹರ್ಷಿ ವಾಲ್ಮೀಕಿ ಜೀವನಾಧಾರಿತ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರು ನಗರ ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಜನವರಿ 16 ರಿಂದ 217ನೇ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಜನ ಆಗಮಿಸಿ ಸಂಜೆ 6 ಗಂಟೆಯವರೆಗೂ ವೀಕ್ಷಣೆ ಮಾಡಿದರು.

BENGALURU  ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ  LIFE OF MAHARISHI VALMIKI  FLOWER AND FRUIT EXHIBITION
ಶನಿವಾರ 62 ಸಾವಿರ ಮಂದಿಯಿಂದ ಫಲಪುಷ್ಪ ವೀಕ್ಷಣೆ (ETV Bharat)

ಶನಿವಾರ 62 ಸಾವಿರ ಜನ ವೀಕ್ಷಣೆ: ಶನಿವಾರ ಒಂದೇ ದಿನ 39 ಸಾವಿರ ಮಂದಿ ವಯಸ್ಕರು ಮತ್ತು 23 ಸಾವಿರ ಮಕ್ಕಳು ಸೇರಿ ಒಟ್ಟು 62 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು 32 ಲಕ್ಷ ರೂ.ಗಳ ಶುಲ್ಕ ಸಂಗ್ರಹವಾಗಿದೆ. ಇನ್ನು ಇಂದು ಸರ್ಕಾರಿ ರಜೆಯಿದ್ದು, ನಿರೀಕ್ಷೆಗೂ ಮೀರಿ ಜನ ಆಗಮಿಸುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನ ದಟ್ಟಣೆಯಿಂದ ದ್ವಾರ ಮುಕ್ತ: ಈ ಹಿಂದೆ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್‌ಲೈನ್​ನಲ್ಲಿ ಮಾತ್ರ ಟಿಕೆಟ್​​ ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷದಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಆನ್ಲೈನ್ ಹಾಗೂ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಜನ ಆನ್ಲೈನ್ ಮೂಲಕ ಟಿಕೆಟ್ ಖರೀದಿ ಮಾಡುತ್ತಿದ್ದು, ಯಾವುದೇ ದ್ವಾರದಲ್ಲಿಯೂ ಜನ ದಟ್ಟಣೆ ಉಂಟಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಕಿಕ್ಕಿರಿದ ಜನ (ETV Bharat)

ಸುಮಾರು ಮೂರು ಲಕ್ಷಕ್ಕೂ ಅಧಿಕ ಹಲವು ಜಾತಿ ಹೂವುಗಳಿಂದ ವಿವಿಧ ಕಲಾಕೃತಿ ನಿರ್ಮಿಸಲಾಗಿದೆ. ನೋಡಗರನ್ನು ಕಣ್ಮನ ಸೆಳೆಯುವಂತಹ ಆಕರ್ಷಣೆಯನ್ನುಂಟು ಮಾಡುವಂತೆ ಚಿತ್ರಿಸಲಾಗಿದೆ. ಅಲ್ಲದೆ, ತ್ರಿವೇಣಿ ಸಂಗಮದ ವಾಲ್ಮಿಕಿ ಆಶ್ರಮ ದೇವಾಲಯವನ್ನು ಅನೇಕ ಬಗೆಯ ಪುಷ್ಪಗಳಿಂದ ನಿರ್ಮಿಸಿದ್ದಾರೆ. ಇದು ಸಹ ಪ್ರಮುಖ ಆಕರ್ಷಣೆಯಾಗಿದೆ. ಈ ಪ್ರದರ್ಶನಕ್ಕೆ ವಾಲ್ಮೀಕಿ ವಿಷಯ ಕುರಿತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿಗಳು ಜನವರಿ 16ರಂದು ಚಾಲನೆ ನೀಡಿದ್ದರು.

ಫಲಪುಷ್ಪ ಪ್ರದರ್ಶನಕ್ಕೆ 85ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳನ್ನು ಬಳಕೆ ಮಾಡಲಾಗುತ್ತದೆ. ಈ ಹೂವುಗಳನ್ನು ಊಟಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬೆಟ್ಟ ಪ್ರದೇಶಗಳಿಂದ ತರಿಸಿಕೊಳ್ಳಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸೇವಂತಿಗೆ, ಗುಲಾಬಿ, ಆರ್ಕಿಡ್ಸ್ ವಿವಿಧ ವರ್ಣ ಪಾಯಿನ್ಸಿಟಿಯಾ, ಪೆಂಟಾಸ್ ಕಾರ್ನಿಯಾ ಬ್ರೋಮಿಲಿಯಾಯ್ದ, ಟ್ಯೂಬಿರೋಸ್‌ರೋಟೆಡ್ ಬಿಗೋನಿಯಾ, ಸಿಲೋಷಿಯಾ, ಸ್ವಾಟಿಸ್ ಇತ್ಯಾದಿಯಾಗಿವೆ.

ಇದನ್ನೂ ಓದಿ: ಸಿರಿಧಾನ್ಯ ಮೇಳ ಯಶಸ್ವಿ, 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ: ₹185 ಕೋಟಿ ವ್ಯಾಪಾರ ಒಪ್ಪಂದ

ಇದನ್ನೂ ಓದಿ: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ: 189 ವರ್ಷಗಳ ಇತಿಹಾಸ, ಏನೆಲ್ಲ ಬದಲಾವಣೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.