ಠಾಗೋರ್ ಕಡಲತೀರದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಕಲರವ: ವಿಡಿಯೋ ನೋಡಿ - Kite Competition In Beach - KITE COMPETITION IN BEACH
🎬 Watch Now: Feature Video
Published : Sep 30, 2024, 7:33 PM IST
ಕಾರವಾರ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಕಡಲ ನಗರಿ ಕಾರವಾರದ ಪ್ರಸಿದ್ಧ ಠಾಗೋರ್ ಕಡಲತೀರದಲ್ಲಿ ಗಾಳಿಪಟ ಸ್ಪರ್ಧೆ ನಡೆಯಿತು. ಜನರು ಕೈಯಲ್ಲಿ ದಾರ ಹಿಡಿದು ಬಣ್ಣ ಬಣ್ಣದ ಗಾಳಿಪಟ ಹಾರಿಸುತ್ತ ಎಂಜಾಯ್ ಮಾಡುತ್ತಿದ್ದರೆ, ಮುಸ್ಸಂಜೆ ವೇಳೆಗೆ ಕಡಲತೀರದತ್ತ ವಿಹಾರಕ್ಕೆ ಬಂದ ಸಾವಿರಾರು ಮಂದಿ ಈ ದೃಶ್ಯವನ್ನು ಕಣ್ತುಂಬಿಕೊಂಡರು.
ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದ ಪ್ರವಾಸೋದ್ಯಮ ಇಲಾಖೆಯಿಂದ ಇಂದು ಗಾಳಿಪಟ ಹಾರಿಸುವ ಸ್ಪರ್ಧೆ ನಡೆಯಿತು. ಕೆಲವರು ವಿಭಿನ್ನ ಗಾಳಿಪಟಗಳನ್ನು ಹಿಡಿದು ಕಡಲತೀರಕ್ಕೆ ಬಂದರೆ, ಗಾಳಿಪಟ ತರದವರಿಗೆ ಪ್ರವಾಸೋದ್ಯಮ ಇಲಾಖೆಯಿಂದಲೇ ಗಾಳಿಪಟ ವಿತರಿಸಲಾಯಿತು. ಸುಮಾರು 200ಕ್ಕೂ ಅಧಿಕ ಜನರು ಕಡಲ ತೀರದಲ್ಲಿ ಗಾಳಿಪಟವನ್ನು ಹಾರಿಸಿ ಎಂಜಾಯ್ ಮಾಡಿದರು.
ಇದೇ ವೇಳೆ, ಕಾರವಾರ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರೀಯಾ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸೇರಿದಂತೆ ಹಲವು ಅಧಿಕಾರಿಗಳು ಸಹ ಗಾಳಿ ಪಟ ಹಾರಿಸಿ ಸಂಭ್ರಮಿಸಿದರಲ್ಲದೆ, ಪ್ರವಾಸಿಗರಿಗೆ ಹುರಿದುಂಬಿಸಿದರು. ಸಂಜೆ ಸಮಯವಾದ್ದರಿಂದ ಸೂರ್ಯಾಸ್ತದ ದೃಶ್ಯವೂ ಕೂಡ ನೆರೆದವರನ್ನು ಆಕರ್ಷಿಸಿತು. ''ಕಡಲ ತೀರದಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ'' ಎಂದು ಸ್ಪರ್ಧೆಗೆ ಆಗಮಿಸಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೈಸೂರು ಪೇಟಕ್ಕಿದೆ ರಾಜ ಪರಂಪರೆಯ ಇತಿಹಾಸ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ - Mysuru peta