ETV Bharat / bharat

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಶಾಂತಿಯುತ ಮುಕ್ತಾಯ; ಒಂದೇ ಒಂದು ಕಡೆ ಮರು ಮತದಾನ ಇಲ್ಲ - Jammu Kashmir Assembly Polls - JAMMU KASHMIR ASSEMBLY POLLS

ಭಾರಿ ನಿರೀಕ್ಷೆ ಮತ್ತು ಆತಂಕ ಮೂಡಿಸಿದ್ದ ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯ ಕಂಡಿದೆ. ವಿಶೇಷವೆಂದರೆ 90 ಕ್ಷೇತ್ರಗಳ ಪೈಕಿ ಒಂದೇ ಒಂದು ಕಡೆ ಮರು ಮತದಾನ ದಾಖಲಾಗಿಲ್ಲ.

ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ
ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ (ETV Bharat)
author img

By PTI

Published : Oct 1, 2024, 11:01 PM IST

ನವದೆಹಲಿ: ಮಂಗಳವಾರ ಮುಕ್ತಾಯಗೊಂಡ ಮೂರು ಹಂತಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಶಾಂತಿಯುತವಾಗಿ ಮುಗಿದಿದ್ದು, ಇದುವರೆಗೆ ಯಾವುದೇ ಮರುಮತದಾನ ದಾಖಲಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಉಗ್ರ ದಾಳಿ, ಪ್ರತ್ಯೇಕತಾವಾದಿಗಳ ಉಪಟಳದಿಂದ ಚುನಾವಣೆಗೆ ಭಾರೀ ಅಡ್ಡಿಯಾಗಲಿದೆ ಎಂಬ ಆತಂಕದ ಮಧ್ಯೆ ನಡೆದ ಚುನಾವಣೆಯೂ ಈ ಹಿಂದಿಗಿಂತಲೂ ಅತಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 2014 ರಲ್ಲಿ ಭದ್ರತಾ ಕಾರಣಗಳಿಗಾಗಿ 5 ಹಂತದಲ್ಲಿ ಮತದಾನ ನಡೆದಿತ್ತು. ಈ ಬಾರಿ 3 ಹಂತದಲ್ಲಿ ಮತದಾನ ನಡೆಸಲಾಗಿದೆ. ದಶಕದ ಹಿಂದೆ 83 ಸ್ಥಾನಗಳಿದ್ದ ವಿಧಾನಸಭೆ ಸಂಖ್ಯೆ ಈಗ 90 ಕ್ಕೆ ಏರಿಕೆಯಾಗಿದೆ. ಆದಾಗ್ಯೂ ಯಾವುದೇ ಅಹಿತಕರ ಘಟನೆಗಳು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದೆ.

ಮೂರು ಹಂತದ ಚುನಾವಣೆಯಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಹಾಳಾದ ಘಟನೆಗಳು ವರದಿಯಾಗಿಲ್ಲ. 2014 ಕ್ಕೆ ಹೋಲಿಸಿದರೆ ಇದು ಗಮನಾರ್ಹ ಸುಧಾರಣೆಯಾಗಿದೆ. 2014 ರಲ್ಲಿ ಮತದಾನದ ದಿನ ಸೇರಿದಂತೆ 170 ಕ್ಕೂ ಹೆಚ್ಚು ಘಟನೆಗಳು ವರದಿಯಾಗಿದ್ದವು ಎಂದು ಆಯೋಗ ಹೇಳಿದೆ.

ಅಭೂತಪೂರ್ವ ಯಶಸ್ಸು: ರಾಜಕೀಯ ಪಕ್ಷಗಳ ತಿಕ್ಕಾಟ, ಕಾರ್ಯಕರ್ತರ ನಡುವಿನ ಘರ್ಷಣೆಗಳು ಸೇರಿದಂತೆ ಯಾವುದೇ ಅಹಿತಕೆ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಿಲ್ಲ. ಕಳದ ಒಂದು ದಶಕದಲ್ಲೇ ಇದು ಅಭೂತಪೂರ್ವ ಚುನಾವಣಾ ಯಶಸ್ಸು ಎಂದು ಬಣ್ಣಿಸಿದೆ.

ಮತದಾನಕ್ಕೂ ಮೊದಲೇ ಮತಗಟ್ಟೆಗಳ ವಶ, ನಾಶದಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಜನರು ತಮಗೆ ನಿಗದಿ ಮಾಡಿದ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ. 2014 ರಲ್ಲಿ ಹಲವು ಕಾರಣಗಳಿಗಾಗಿ 98 ಮತಗಟ್ಟೆಗಳನ್ನು ಸ್ಥಳಾಂತರಿಸಲಾಗಿತ್ತು. ಈ ಬಾರಿ ಅಂತಹ ಒಂದೇ ಒಂದು ಘಟನೆ ನಡೆದಿಲ್ಲ ಎಂದು ಚುನಾವಣಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.

ಚುನಾವಣೆಯಲ್ಲಿ ಮಹಿಳಾ ಸ್ಪರ್ಧೆ ಹೆಚ್ಚಳ: ಚುನಾವಣೆಯಲ್ಲಿ ಸಹಜವಾಗಿ ಸದ್ದು ಮಾಡುವ ಹಣ, ತೋಳ್ಬಲವನ್ನು ಈ ಬಾರಿ ನಿಯಂತ್ರಿಸಲಾಗಿದೆ. 2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಶೇ.7ರಷ್ಟು ಅಭ್ಯರ್ಥಿಗಳು ಕಣದಲ್ಲಿ ಹೆಚ್ಚಿದ್ದಾರೆ. ಅದರಲ್ಲೂ ಮಹಿಳಾ ಅಭ್ಯರ್ಥಿಗಳು ಗಮನಾರ್ಹ ಏರಿಕೆ ಕಂಡಿದ್ದಾರೆ. ಕಳೆದ ಬಾರಿ 28 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರೆ, ಈ ಬಾರಿ 43 ಮಂದಿ ಕಣದಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳು ಕೂಡ ಶೇಕಡಾ 26 ರಷ್ಟು ಏರಿಕೆ ಕಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

2014 ರಲ್ಲಿ 138 ನೋಂದಾಯಿತ ಮತ್ತು ಗುರುತಿಸಿಕೊಳ್ಳದ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿದ್ದವು. ಈ ಬಾರಿ ಅವುಗಳು 236 ಕ್ಕೆ ಏರಿಕೆ ಕಂಡಿವೆ. ಅಂದರೆ, ಶೇಕಡಾ 71 ರಷ್ಟು ಹೆಚ್ಚಳ ಇದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಓದಿ: ಜಮ್ಮು- ಕಾಶ್ಮೀರ ಚುನಾವಣೆ: ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು, ಹಲವರ ಮೇಲಿದೆ ಕ್ರಿಮಿನಲ್​​ ಕೇಸ್​ - ADR reoprt on J K Assembly Polls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.