ಮೂಲ ಸೌಲಭ್ಯಗಳ ವಂಚಿತ ಶಿಡ್ಲಘಟ್ಟ ತಾಲೂಕಿನ ಚಂಗವಾರಹಳ್ಳಿ - undefined
🎬 Watch Now: Feature Video
ಚಿಕ್ಕಬಳ್ಳಾಪುರ ಜಿಲ್ಲೆಯ ಚಂಗವಾರಹಳ್ಳಿಯಲ್ಲಿ ಸರ್ಕಾರಿ ಸೌಲಭ್ಯಗಳು ಮರಿಚೀಕೆಯಾಗಿಯೇ ಉಳಿದಿವೆ. ರಸ್ತೆ, ಚರಂಡಿಗಳು, ಕುಡಿಯಲು ನೀರಿನ ಸೌಲಭ್ಯ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳು ಈ ಜನರ ಕನಸಿನ ಮಾತಾಗಿದೆ. ಕೋರ್ಲಪರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಂಗವಾರಹಳ್ಳಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮಾಭಿವೃದ್ಧಿಗಾಗಿ ಗ್ರಾಮಸ್ಥರು ಅಂಗಲಾಚಿದರೂ, ಯಾವ ಜನಪ್ರತಿನಿಧಿಯೂ ಸ್ಪಂದಿಸಿಲ್ಲ. ಹಳ್ಳಿಯ ಯಾವ ಕೆಲಸವನ್ನು ಮಾಡಲು ದುಡ್ಡು ಕೊಟ್ಟು ಮಾಡಿಸಬೇಕು ಎಂದು ಗ್ರಾಮಸ್ಥರ ಅಳಲು.