ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು: ಇಬ್ಬರ ರಕ್ಷಣೆ - ಹಿಮಾಚಲ ಪ್ರದೇಶದಲ್ಲಿ ನದಿಗೆ ಬಿದ್ದ ಕಾರು
🎬 Watch Now: Feature Video
ಲಾಹೌಲ್ ಸ್ಪಿಟಿ: ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್ ಸ್ಪಿಟಿ ಬಳಿ ಕಾರೊಂದು ನದಿಗೆ ಬಿದ್ದ ಘಟನೆ ನಡೆದಿದೆ. ಕಾಜಾ-ಟ್ಯಾಬೊ ರಸ್ತೆಯ ಶಿಗೊ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸ್ಪಿಟಿ ನದಿಗೆ ಬಿದ್ದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದವರನ್ನು ರಕ್ಷಿಸಿದರು. ಬಳಿಕ ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.