ಬೈಕ್​ ಮೇಲೆ ಆಸ್ಪತ್ರೆಗೆ ಸಾಗಿಸಿದ್ರೂ ಬದುಕಲಿಲ್ಲ ಯುವಕ... ಮನಕಲಕುವ ವಿಡಿಯೋ ವೈರಲ್​​​! - ಭದ್ರಾದಿ ಕೋಥಗುಡೆಮ್ ಬೈಕ್​ ಮೇಲೆ ಯುವಕನನ್ನು ಸಾಗಿಸುತ್ತಿರುವ ಸುದ್ದಿ

🎬 Watch Now: Feature Video

thumbnail

By

Published : Aug 28, 2019, 7:28 PM IST

ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬ ಭಯದಿಂದ ಆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಭದ್ರಾದಿ ಕೋಥಗುಡೆಮ್​ ಜಿಲ್ಲೆಯ ಅಶ್ವಾರಾವ್​ಪೇಟ್​ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ  ಕೆಲ ಕಿಡಿಗೇಡಿಗಳು ಎಟಿಎಂ  ಧ್ವಂಸ ಮಾಡಿದ್ದರು. ಈ ಪ್ರಕರಣಕ್ಕೆ ಕಲ್ಯಾಣ್​ ಸಾಕ್ಷಿಯಾಗಿದ್ದ. ಆದ್ರೆ, ಪೊಲೀಸರು ಕಲ್ಯಾಣ್​ನನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಕಲ್ಯಾಣ್​ಗೆ ಪೊಲೀಸರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಕಲ್ಯಾಣ್ ನೇಣು ಬಿಗಿದುಕೊಂಡು​ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಸಂಬಂಧಿಗಳು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಸಮಯಕ್ಕೆ  ಸರಿಯಾಗಿ ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಬೈಕ್​ ಮೇಲೆ ಕಲ್ಯಾಣ್​ನನ್ನು ಕರೆದೊಯ್ಯಲಾಗಿತ್ತು. ಆದರೆ  ಕಲ್ಯಾಣ್​ ಬದುಕುಳಿಯಲಿಲ್ಲ. ಇನ್ನು ಕಲ್ಯಾಣ್​ನನ್ನು ಬೈಕ್​ ಮೇಲೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಮನಕಲಕುವಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.