ವೋಟರ್ ಲಿಸ್ಟ್ನಲ್ಲಿ ತಾಯಿ ಹೆಸರಿಲ್ಲವೆಂದು ಮೊಬೈಲ್ ಟವರ್ ಏರಿದ ಮಗ.. ವಿಡಿಯೋ! - ಉತ್ತರ ಪ್ರದೇಶ ಪಂಚಾಯ್ತಿ ಚುನಾವಣೆ
🎬 Watch Now: Feature Video
ಮೈನ್ಪುರಿ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ತಯಾರಿ ಜೋರಾಗಿ ನಡೆದಿದ್ದು, ಇದರ ಮಧ್ಯೆ ವೋಟರ್ ಲಿಸ್ಟ್ನಲ್ಲಿ ತಾಯಿ ಹೆಸರಿಲ್ಲವೆಂದು ಮಗನೊಬ್ಬ ಮೊಬೈಲ್ ಟವರ್ ಏರಿದ್ದಾನೆ. ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಯುವಕನ ಮನವೊಲಿಕೆ ಮಾಡಿ ಕೆಳಗೆ ಇಳಿಸಿದ್ದಾರೆ. ಆದರ್ಶ್ ಕುಮಾರ್ ಎಂಬ ಯುವಕ ಮೊಬೈಲ್ ಟವರ್ ಏರಿದ್ದು, ತಾಯಿ ಶಾಂತಿ ದೇವಿ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ್ದಕ್ಕಾಗಿ ಈ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾನೆ. ಪದೇ ಪದೆ ಇದರ ಬಗ್ಗೆ ದೂರು ನೀಡಿದ ನಂತರ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ಶಾಂತಿ ಉಲ್ಲಂಘನೆ ಮಾಡಿದ್ದಕ್ಕಾಗಿ ಆದರ್ಶ್ ಕುಮಾರ್ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಜಾಮೀನಿನ ಮೇಲೆ ರಿಲೀಸ್ ಮಾಡಿದ್ದಾರೆ.