ಬೇರೆಯವಳೊಂದಿಗೆ ಪಲ್ಲಂಗದಾಟ: ಒನಕೆಯಿಂದ ಪತಿಯ ತಲೆ ಜಜ್ಜಿ ಕೊಲೆಗೈದ ಪತ್ನಿ! - ಗುಂಟೂರು ಅಪರಾಧ ಸುದ್ದಿ
🎬 Watch Now: Feature Video

ಬೇರೆ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿದ್ದ ಗಂಡನನ್ನು ಒನಕೆಯಿಂದ ತಲೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಪೆನುಮಾಕು ಗ್ರಾಮದ ರತ್ನಾಕರ್ ವಿಜಯನಗರ ಜಿಲ್ಲೆಯ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿದ್ದ. ಈ ವಿಷಯ ಸಂಬಂಧ ಪತ್ನಿ ಗಂಡನೊಂದಿಗೆ ಜಗಳವಾಡಿದ್ದಳು. ಇವರ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಪತ್ನಿ ಒನಕೆಯಿಂದ ಗಂಡನ ತಲೆಗೆ ಹೊಡೆದು ಸಾಯಿಸಿದ್ದಾಳೆ. ಕೊಲೆ ಮಾಡಿದ ಬಳಿಕ ಸುನೀತ ಮಗನೊಂದಿಗೆ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.