ಭಾರಿ ಹಿಮಪಾತದ ನಡುವೆ ಕುದುರೆ ಮೇಲೇರಿ ವರನ ಮನೆ ಸೇರಿದ ವಧು: ಹೇಗಿತ್ತು ಆ ಕಠಿಣ ಹಾದಿ!! - ಹಿಮಪಾತದ ಹಸೆಮನೆ ಏರಿದ ನವ ಜೋಡಿ
🎬 Watch Now: Feature Video
ಚಮೋಲಿ (ಉತ್ತರಾಖಂಡ್) : ಮದುವೆ ಪ್ರತಿಯೊಬ್ಬ ಮನುಷ್ಯನ ಜೀವನದ ಒಂದು ಅಮೂಲ್ಯ ಕ್ಷಣ. ಅಂತಹ ಅಪೂರ್ಣ ಕ್ಷಣಕ್ಕೆ ಪ್ರಕೃತಿಯೂ ವಿಶಿಷ್ಟವಾಗಿ ರೆಡಿಯಾದ್ರೆ ಹೇಗಿರುತ್ತೆ. ಹೌದು, ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಬಾರಿ ಹಿಮಪಾತದ ನಡುವೆಯೇ ಇಬ್ಬರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುರಿಯುತ್ತಿದ್ದ ಹಿಮದ ನಡುವೆಯೇ ವಿವಾಹದ ಎಲ್ಲ ವಿಧಿ ವಿದಾನಗಳನ್ನು ಪೂರ್ಣಗೊಳಿಸಿ, ಕುದುರೆಯ ಮೇಲೆ ವರನ ಮನೆಗೆ ತೆರಳುತ್ತಿದ್ದಂತೆ ವಧುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಿಮರಾಶಿಯ ನಡುವೆ ನಡೆದ ಈ ವಿಶಿಷ್ಟ ವಿವಾಹದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.