ಮಾಸ್ಕ್ನಲ್ಲೇ ಸಿದ್ಧಗೊಂಡ ಮದುವೆ ಕಾರ್ಡ್... ಶಿಕ್ಷಕಿ ಮಗನ ಮದುವೆಯಲ್ಲಿ ಇದೇ ಚರ್ಚೆ! - ಮಾಸ್ಕ್ನಲ್ಲೇ ಮದುವೆ ಕಾರ್ಡ್
🎬 Watch Now: Feature Video
ಗೋದಾವರಿ: ದೇಶಾದ್ಯಂತ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಇದರ ಮಧ್ಯೆ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಶಿಕ್ಷಕಿಯೊಬ್ಬರು ತಮ್ಮ ಮಗನ ಮದುವೆ ಮಾಡಿದ್ದು, ಅಲ್ಲಿಗೆ ಬರುವವರಿಗೆ ಮಾಸ್ಕ್ನಲ್ಲೇ ಮದುವೆ ಕಾರ್ಡ್ ತಯಾರಿಸಿ ನೀಡಿದ್ದಾರೆ. ಇವರ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾವೇರಿ ರೆಡ್ಡಿ ಎಂಬುವವರು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಮಗ ಕಿರಣ ಹಾಗೂ ಲಕ್ಷ್ಮೀ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.