2025 Honda Unicorn Launched: ಹೋಂಡಾ ಯೂನಿಕಾರ್ನ್ ಅಭಿಮಾನಿಗಳಿಗೆ ಸಂತಸದ ಸುದ್ದಿ. 2025 ಮಾಡೆಲ್ ಹೋಂಡಾ ಯುನಿಕಾರ್ನ್ ದೇಶೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೋಂಡಾ ದ್ವಿಚಕ್ರ ವಾಹನಗಳಲ್ಲಿ ಯುನಿಕಾರ್ನ್ ಮಾದರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಬಹುದು. ಏಕೆಂದರೆ ಕಂಪನಿಯಿಂದ ಬಂದ ಮೋಟಾರ್ ಸೈಕಲ್‌ಗಳಲ್ಲಿ, ಇದು ಭಾರಿ ಮಾರಾಟದೊಂದಿಗೆ ಹೆಚ್ಚು ಯಶಸ್ವಿಯಾಗಿದೆ.
ಹಳೆಯ ಮಾದರಿಗಳ ಅಪ್ಡೇಟ್: 2024 ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿದ್ದಂತೆ ಕಂಪನಿಯು ತನ್ನ ಹಳೆಯ ಮಾದರಿಗಳನ್ನು ಅಪ್ಡೇಟ್ ಮಾಡುತ್ತಿದೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ ಅಪ್ಡೇಟ್ ಮಾಡಿದ 'Activa 125', 'SP 125' ಮತ್ತು 'SP160' ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಈಗ ತನ್ನ '2025 ಹೋಂಡಾ ಯುನಿಕಾರ್ನ್' ಮೋಟಾರ್ ಸೈಕಲ್ ಬಿಡುಗಡೆ ಮಾಡಿದೆ.
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ತನ್ನ ಉತ್ಪನ್ನಗಳನ್ನು OBD2B ಮಾನದಂಡಗಳನ್ನು ಪೂರೈಸಲು ನವೀಕರಿಸುತ್ತಿದೆ. ಈಗ ಈ ಹೊಸ ಯುನಿಕಾರ್ನ್ ಅದೇ ಅಪ್ಡೇಟ್ಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಈ ಹೊಸ ಬೈಕ್ ಹಲವು ನವೀಕರಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಅಪ್ಡೇಟ್ಗಳ ಪ್ರಕಾರ, ಈ ಹೊಸ ಯುನಿಕಾರ್ನ್‌ನ ಬೆಲೆಯು ಹಿಂದಿನದಕ್ಕಿಂತ ಹೆಚ್ಚಾಗಿದೆ. ಕಂಪನಿಯು '2025 ಹೋಂಡಾ ಯುನಿಕಾರ್ನ್' ಬೈಕ್ ಅನ್ನು ರೂ. 1.19 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಪ್ರಸ್ತುತ ಮಾದರಿಗಿಂತ 8,000 ರೂ.ಗೂ ಹೆಚ್ಚಾಗಿದೆ.
ಹೊಸ ಮಾದರಿಯಲ್ಲಿ ಏನೆಲ್ಲ ಇದೆ?; ಈ ಹೊಸ ಮಾದರಿಯ ಬೈಕ್ ಎಲ್ಲಾ ಎಲ್ಇಡಿ ಹೆಡ್ ಲೈಟ್ಗಳನ್ನು ಹೊಂದಿದೆ. ಆದರೂ ಈ ಹೆಡ್‌ಲೈಟ್ ಯುನಿಟ್ನ ಡಿಸೈನ್ ಹಳೆಯ ಮಾದರಿಯಂತೆಯೇ ಇದೆ. ಈ ಬೈಕ್ ನವೀಕರಿಸಿದ ಡಿಜಿಟಲ್ LCD ಕ್ಲಸ್ಟರ್‌ನೊಂದಿಗೆ ಬರುತ್ತದೆ. ಇದು ಗೇರ್ ಪೊಸಿಷನ್ ಇಂಡಿಕೇಟರ್, ಸರ್ವಿಸ್ ಡ್ಯೂ ಇಂಡಿಕೇಟರ್, 'ಇಕೋ' ಇಂಡಿಕೇಟರ್ ಮುಂತಾದ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳ ಹೊರತಾಗಿ ಕಂಪನಿಯು ಈಗ ಈ ಹೊಸ ಮೋಟಾರ್‌ಸೈಕಲ್‌ನಲ್ಲಿ 15-ವ್ಯಾಟ್ USB-C ಚಾರ್ಜಿಂಗ್ ಪೋರ್ಟ್ ಸಹ ಒದಗಿಸಿದೆ.
ಕಂಪನಿಯು ಈ ಹೊಸ 2025 ಹೋಂಡಾ ಯುನಿಕಾರ್ನ್ ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ರೆಡಿಯಂಟ್ ರೆಡ್ ಮೆಟಾಲಿಕ್ ಎಂಬ ಮೂರು ಕಲರ್ಗಳ ಆಪ್ಷನ್ನಲ್ಲಿ ಹೊರ ತಂದಿದೆ.
ಹೇಗಿದೆ ಗೊತ್ತಾ ಎಂಜಿನ್: 2025 ಹೋಂಡಾ ಯುನಿಕಾರ್ನ್ ಅಸ್ತಿತ್ವದಲ್ಲಿರುವ 162.71cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಆದರೆ ಇದು ಮೊದಲಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಈ ಎಂಜಿನ್ 13.1bhp ಪವರ್ ಮತ್ತು 14.58Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಮೊದಲಿನಂತೆಯೇ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
ಓದಿ: 'ಬ್ರಹ್ಮಾಂಡದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ, ಆ ಸಿದ್ಧಾಂತಗಳೆಲ್ಲವೂ ತಪ್ಪು' : ವಿಭಿನ್ನ ವಾದ