Watch - ಸಿಂಹದ ಮರಿಯನ್ನು ಕೈಯ್ಯಲ್ಲೇ ಆರೈಕೆ ಮಾಡುವ ಯುವಕ.. - ಸಿಂಹದ ಮರಿಯನ್ನು ಕೈಯ್ಯಲ್ಲೇ ಆರೈಕೆ ಮಾಡುವ ಯುವಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14307986-thumbnail-3x2-megha.jpg)
ಭುವನೇಶ್ವರ (ಒಡಿಶಾ): ಅಪಾಯಕಾರಿ ಪ್ರಾಣಿಗಳಲ್ಲೊಂದಾದ ಸಿಂಹವಾಗಲಿ, ಸಿಂಹದ ಮರಿಯಾಗಲಿ ಮನುಷ್ಯರ ಜೊತೆ ಅಷ್ಟು ಅನ್ಯೋನ್ಯವಾಗಿರುವುದಿಲ್ಲ. ಆದರೆ, ಒಡಿಶಾದ ಭುವನೇಶ್ವರದ ನಂದನ್‌ಕಾನನ್ ಝೂಲಾಜಿಕಲ್ ಪಾರ್ಕ್‌ನಲ್ಲಿ 'ವರ್ಷಾ' ಹೆಸರಿನ 7 ತಿಂಗಳ ಸಿಂಹದ ಮರಿಯನ್ನು ಪ್ರಶಾಂತ್ ಕುಮಾರ್ ಗೌರವ್ ಎಂಬುವರು ತಮ್ಮ ಕೈಯ್ಯಲ್ಲೇ ಆರೈಕೆ ಮಾಡಿ ಅದರ ಪಾಲನೆ-ಪೋಷಣೆ ಮಾಡುತ್ತಿದ್ದಾರೆ. ವರ್ಷಾ ಜೊತೆ ಮತ್ತೆರೆಡು ಸಿಂಹದ ಮರಿಗಳು ತಾಯಿಯಿಂದ ದೂರವಾಗಿದ್ದವು. ಹುಟ್ಟಿದ ಕೆಲ ಹೊತ್ತಿಗೇ ಒಂದು ಮರಿ ಸತ್ತಿದ್ದು, ಅಸಮರ್ಪಕ ಪೋಷಣೆಯಿಂದ ಮತ್ತೊಂದು ಮರಿ ಕೂಡ ಮೃತಪಟ್ಟಿತ್ತು. ವರ್ಷಾ ಕೂಡ ಅಷ್ಟೊಂದು ಆರೋಗ್ಯವಾಗಿರಲಿಲ್ಲ. ಹೀಗಾಗಿ, ಪಾರ್ಕ್ ಅಧಿಕಾರಿಗಳು ವರ್ಷಾಳ ಆರೈಕೆಯನ್ನು ಕೇರ್ಟೇಕರ್ಗೆ ವಹಿಸಿದ್ದು, ಇದೀಗ ಪ್ರಶಾಂತ್ ಆಕೆಯನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
TAGGED:
adorable lion cub video