ಇದ್ದಕ್ಕಿದ್ದಂತೆ ಕುಸಿದುಬಿದ್ದ ಗುಡ್ಡ: ಬದ್ರಿನಾಥ್ ಹೆದ್ದಾರಿ ಸ್ಥಗಿತ - ವಿಡಿಯೋ - ಬದ್ರಿನಾಥ್
🎬 Watch Now: Feature Video

ಚಮೋಲಿ(ಉತ್ತರಾಖಂಡ್): ಜಿಲ್ಲೆಯ ಗೌಚರ್ ಭಾಗದ ಇಂಡೋ - ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದ ಬಳಿ ಇಂದು ಬೆಳಗ್ಗೆ ಭಾರಿ ಭೂಕುಸಿತ ಉಂಟಾಗಿದ್ದು, ಬದ್ರಿನಾಥ್ ಹೆದ್ದಾರಿ ಸ್ಥಗಿತಗೊಂಡಿದೆ. ಇನ್ನು ಬಂಗಪಾನಿ ಭಾಗದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ, ಮನೆ ಕುಸಿದು ಬಿದ್ದಿದ್ದು, ಇಬ್ಬರು ಈ ವೇಳೆ ಗಾಯಗೊಂಡಿದ್ದಾರೆ. ಬದ್ರಿನಾಥ್ ಹೆದ್ದಾರಿಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
Last Updated : Jul 27, 2020, 1:45 PM IST