ಗಾಳಿಪಟದ ಜೊತೆ ಆಗಸಕ್ಕೆ ಹಾರಿದ 3 ವರ್ಷದ ಮಗು: ವಿಡಿಯೋ - ತೈವಾನ್
🎬 Watch Now: Feature Video

ಗಾಳಿಪಟ ಪ್ರದರ್ಶನದ ವೇಳೆ ಮೂರು ವರ್ಷದ ಮಗುವೊಂದು ಗಾಳಿಪಟದೊಂದಿಗೆ ಆಗಸಕ್ಕೆ ಹಾರಿರುವ ಘಟನೆ ನಡೆದಿದೆ. ಇಲ್ಲಿನ ಗಾಳಿಪಟ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವೇಳೆ ಮಗುವಿಗೆ ಗಾಳಿಪಟ ಸುತ್ತಿಕೊಂಡು ಮೇಲಕ್ಕೆ ಎಳೆದೊಯ್ದಿದೆ. ಸುಮಾರು 3 ಮೀಟರ್ನಷ್ಟು ಮೇಲಕ್ಕೆ ಹಾರಿದ ಗಾಳಿಪಟ ಬಳಿಕ ಕೆಳಗಿಳಿದಿದ್ದು, ಅದೃಷ್ಟವಶಾತ್ ಅಪಾಯದಿಂದ ಮಗು ಪಾರಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.