ದೆಹಲಿ ಮೆಟ್ರೋದಲ್ಲಿ ಹಾಯಾಗಿ ಪ್ರಯಾಣಿಸಿದ ಮಂಗ: ವಿಡಿಯೋ ವೈರಲ್ - ವೈರಲ್ ವಿಡಿಯೋ

🎬 Watch Now: Feature Video

thumbnail

By

Published : Jun 20, 2021, 12:26 PM IST

ನವದೆಹಲಿ: ನಮ್ಮ ದೇಶದಲ್ಲಿ ಇನ್ನೂ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸದ ಅದೆಷ್ಟೋ ಜನರಿದ್ದಾರೆ. ಅಂಥದ್ರಲ್ಲಿ ಇಲ್ಲೊಂದೆಡೆ ಮಂಗವೊಂದು ಮೆಟ್ರೋದಲ್ಲಿ ಪ್ರಯಾಣಿಸಿ ಎಂಜಾಯ್ ಮಾಡಿದೆ. ನವದೆಹಲಿಯ ಮೆಟ್ರೋ ರೈಲಿನದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೋತಿಯೊಂದು ರಾಜಾರೋಷವಾಗಿ ಮೆಟ್ರೋ ರೈಲಿನಲ್ಲಿ ತುಂಟಾಟ ಆಡುತ್ತಾ ಜನರ ಮಧ್ಯೆ ಪ್ರಯಾಣಿಸುವುದನ್ನು ಕಾಣಬಹುದು. ದೆಹಲಿಯ ಆನಂದ್ ವಿಹಾರ್​ನಿಂದ -ದ್ವಾರಕಾ ನಡುವಿನ ಬ್ಲೂ ಲೈನ್ ಮೆಟ್ರೋದಲ್ಲಿ ಈ ಕೋತಿ ಪ್ರಯಾಣಿಸಿದೆ ಎಂದು ಹೇಳಲಾಗ್ತಿದೆ. ಈ ಕೋತಿ ಯಮುನಾ ಬ್ಯಾಂಕ್ ನಿಲ್ದಾಣದಲ್ಲಿ ರೈಲು ಹತ್ತಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕೋತಿರಾಯ ರೈಲಿನ ಒಳಗೆ ಹೇಗೆ ಬಂದ? ಎಂಬುದರ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.