ಅಜ್ಮೀರ್ ದರ್ಗಾದಲ್ಲಿ 'ಉರುಸ್ ಸಂಭ್ರಮ, ಸತತ ಆರು ದಿನ ನಡೆಯುತ್ತೆ ಆಕರ್ಷಕ 'ಕವ್ವಾಲಿ' ಗಾಯನ - ಅಜ್ಮೀರ್ ದರ್ಗಾ ಉರೂಸ್ ಸುದ್ದಿ
🎬 Watch Now: Feature Video
'ಕವ್ವಾಲಿ,' ಸೂಫಿ ಭಕ್ತಿ ಗೀತೆಯಾಗಿದ್ದು, ದಕ್ಷಿಣ ಏಷ್ಯಾದ್ಯಂತ ಸೂಫಿ ದರ್ಗಾಗಳಲ್ಲಿ ಹೆಚ್ಚಾಗಿ ಈ ಕವ್ವಾಲಿ ಪ್ರದರ್ಶನ ನೀಡಲಾಗುತ್ತದೆ. ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾದಲ್ಲಿ ಈಗ ಉರುಸ್ ಹಬ್ಬದ ಸಂಭ್ರಮ. ಪೂಜ್ಯ ಸೂಫಿ ಸಂತರಾದ ಮೊಯಿನುದ್ದೀನ್ ಚಿಸ್ತಿಯವರ ಮರಣ ವಾರ್ಷಿಕೋತ್ಸವ ನಿಮಿತ್ತ ನಡೆಯುವ ವಾರ್ಷಿಕ ಉರುಸ್ ಸಮಾರಂಭದಲ್ಲಿ ಕವ್ವಾಲಿಯ ಮೂಲಕ ಭಕ್ತಿ ಸುಧೆ ಹರಿಯಿತು. ಆರು ದಿನಗಳವರೆಗೆ ನಡೆಯುವ ಈ ಸಂಭ್ರಮದಲ್ಲಿ ರಾತ್ರಿಯಿಡೀ ಕವ್ವಾಲಿ ಹಾಡಲಾಗುತ್ತದೆ. ನೂರಾರು ಪ್ರಸಿದ್ಧ ಕವ್ವಾಲಿ ಗಾಯಕರು ಬಂದು ಈ ಕವ್ವಾಲಿ ಗೀತೆಗಳನ್ನು ಹಾಡುತ್ತಾರೆ. ಇದು ದೇಶ-ವಿದೇಶಗಳಿಂದ ಬರುವ ಸಾವಿರಾರು ಯಾತ್ರಿಕರನ್ನು ಆಕರ್ಷಿಸುತ್ತದೆ.