ಮೊಬೈಲ್ನಲ್ಲಿ ಸೆರೆಯಾಯ್ತು ಹೆಬ್ಬಾವುಗಳ ಮಿಲನ ಕ್ರಿಯೆ - ಹೆಬ್ಬಾವುಗಳ ಮಿಲನ ಕ್ರಿಯೆ
🎬 Watch Now: Feature Video
ಆಂಧ್ರಪ್ರದೇಶ:ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕುರು ಮಂಡಲದ ಗಂಜಿಕುಂಟಾ ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ಚೆನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಎರಡು ಹೆಬ್ಬಾವುಗಳು ಮಿಲನ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಹೆಬ್ಬಾವಿನ ಈ ರೀತಿಯ ಪ್ರಕ್ರಿಯೆಗಳು ಕಾಣಸಿಗುವುದು ಅತಿ ವಿರಳ. ದೇವಸ್ಥಾನಕ್ಕೆ ಹೋಗಿರುವ ವೇಳೆ ಭಕ್ತರೊಬ್ಬರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.