ಚಕ್ರಯಪಾಲೆಂ ತಾಂಡಾದಲ್ಲಿ ಬೆಂಕಿ ಅವಘಡ: ಇಬ್ಬರು ಮಕ್ಕಳು ಸಜೀವ ದಹನ - Chakrayapalem Thanda
🎬 Watch Now: Feature Video
ಆಂಧ್ರಪ್ರದೇಶ: ಅಗ್ನಿ ಅವಘಡದಿಂದ ಇಬ್ಬರು ಮಕ್ಕಳು ಜೀವಂತವಾಗಿ ಸುಟ್ಟು ಕರಲಾಗಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚಕ್ರಯಪಾಲೆಂ ತಾಂಡದಲ್ಲಿ ನಡೆದಿದೆ. ಉದಯಬಾಬು ಎಂಬ ವ್ಯಕ್ತಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿದ್ದ ಪೆಟ್ರೋಲ್ ಬಾಟಲ್ಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಅದು ಇಡೀ ಮನೆಗೆ ಆವರಿಸಿ ಮನೆಯಲ್ಲಿದ್ದ ಮಕ್ಕಳು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 2 ವರ್ಷದ ಕೃಪಾಬೈ ಸ್ಥಳದಲ್ಲೇ ಸುಟ್ಟು ಹೋದರೆ 3 ವರ್ಷ ವಯಸ್ಸಿನ ಶಿವನಾಯಕ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದೆ.