ಹಸಿವು ತಾಳಲಾಗದೇ ಊಟ ಮಾಡಿ ಬಿಸಾಡಿದ ಫ್ಲೇಟ್ ನೆಕ್ಕಿದ ಬಾಲಕ... ವಿಡಿಯೋ ವೈರಲ್! - ಒಡಿಶಾ ಇತ್ತೀಚಿನ ಸುದ್ದಿ
🎬 Watch Now: Feature Video
ಸುಂದರಗಢ(ಒಡಿಶಾ): ಇಲ್ಲಿನ ಕೊಯಿಡಾ ಬ್ಲಾಕ್ನಲ್ಲಿರುವ ಮಾಲ್ಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗನುವಾ ಗ್ರಾಮದ ಬಾಲಕನೊಬ್ಬ ಹಸಿವಿನಿಂದ ಊಟ ಮಾಡಿ ಎಸೆದ ಫ್ಲೇಟ್ ನೆಕ್ಕಿರುವ ಘಟನೆ ನಡೆದಿದೆ. ಕೇವಲ ಎರಡೂವರೆ ವರ್ಷದ ಬಾಲಕ ಹಸಿವಿನ ಕಾರಣ ಮಣ್ಣಿನಲ್ಲಿ ಬಿದ್ದಿರುವ ಕಾಗದದ ಊಟದ ಫ್ಲೇಟ್ ನೆಕ್ಕಿದ್ದಾನೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವಿನ ತಾಯಿ ಕಳೆದ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಸದ್ಯ ತಂದೆ ಮೂವರು ಮಕ್ಕಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವ ಕಾರಣ ತಂದೆ ನಿತ್ಯ ಕೆಲಸಕ್ಕೆ ಹೋಗುತ್ತಿದ್ದು, ಮನೆಯಲ್ಲಿರುವ ಮಕ್ಕಳು ಹಸಿವಿನಿಂದ ಬಳಲುವ ಕಾರಣ ಈ ರೀತಿಯಾಗಿ ನಡೆದುಕೊಂಡಿವೆ.
Last Updated : Apr 10, 2021, 4:30 PM IST