ತೆರೆದ ಚರಂಡಿಗೆ ಉರುಳಿಬಿದ್ದ ಇಟ್ಟಿಗೆ ತುಂಬಿದ್ದ ಟ್ರಕ್... ವಿಡಿಯೋ - ಇಟ್ಟಿಗೆ ತುಂಬಿದ್ದ ಟ್ರಕ್ ಪಲ್ಟಿ
🎬 Watch Now: Feature Video
ಉತ್ತರ ಪ್ರದೇಶ: ಇಟ್ಟಿಗೆ ತುಂಬಿಕೊಂಡು ತೆರಳುತ್ತಿದ್ದ ಟ್ರಕ್ವೊಂದು ಪಲ್ಟಿಯಾದ ಘಟನೆ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. ದಸ್ನಾ ಪ್ರದೇಶದ ಮನೆಯೊಂದಕ್ಕೆ ಇಟ್ಟಿಗೆಯನ್ನು ಸಾಗಿಸುತ್ತಿದ್ದಾಗ ಇದ್ದಕ್ಕಿದ್ದಂತೆ ತೆರೆದ ಚರಂಡಿಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಇಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ಅದೃಷ್ಟವಶಾತ್ ಟ್ರಕ್ ಚಾಲಕ ಸೇರಿದಂತೆ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಕ್ ರಸ್ತೆ ಪಕ್ಕದಲ್ಲಿದ್ದ ತೆರೆದ ಚರಂಡಿಯಲ್ಲಿ ಉರಳಿ ಬಿದ್ದಿದೆ ಎನ್ನಲಾಗಿದೆ.