ಸಾಂಪ್ರದಾಯಿಕ 'ಕಾಮನ್ ಕೂತು ಉತ್ಸವ' ಸಂಭ್ರಮ: ವಿಡಿಯೋ - ಪಂಥಲ್ಪುರ್/

🎬 Watch Now: Feature Video

thumbnail

By

Published : Mar 10, 2021, 8:07 AM IST

Updated : Mar 10, 2021, 9:20 AM IST

ಪಂಥಲ್ಪುರ್/ತಮಿಳುನಾಡು: ಪಂಥಲ್ಪುರ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ 'ಕಾಮನ್ ಕೂತು ಉತ್ಸವ' ನಡೆಸಲಾಯಿತು. ಶ್ರೀಲಂಕಾದಿಂದ ಹಿಂದಿರುಗಿದ ಶೇ.50 ರಷ್ಟು ತಮಿಳರು ನೀಲಗಿರಿ ಜಿಲ್ಲೆಯ ಗುಡಲೂರು ಮತ್ತು ಪಂಥಲ್ಪುರ್ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರೊಂದಿಗೆ ವಾಸಿಸುತ್ತಿದ್ದು, ಜನರಲ್ಲಿ ಐಕ್ಯತೆಯ ನಂಬಿಕೆಯಿಂದ ಈ 'ಕಾಮನ್ ಕೂತು ಉತ್ಸವ'ವನ್ನು ಅಮೈಕುಲಂ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ. ಹಬ್ಬವನ್ನು ಆಚರಿಸುವುದರಿಂದ ಜನರನ್ನು ಒಂದುಗೂಡಿಸುವುದರೊಂದಿಗೆ ಆಹಾರದ ಕೊರತೆ ನೀಗಿ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಈ ಉತ್ಸವದಲ್ಲಿ ಪ್ರದರ್ಶನ ನೀಡುವ ಕಲಾವಿದರು ಉತ್ಸವ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಉಪವಾಸ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು 30 ವರ್ಷಗಳಿಂದ ಸ್ಥಳೀಯರು ಆಚರಿಸುತ್ತಾ ಬಂದಿದ್ದಾರೆ ಎನ್ನಲಾಗ್ತಿದೆ.
Last Updated : Mar 10, 2021, 9:20 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.