ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ಇನ್ಸ್ಪೆಕ್ಟರ್ಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - stationed at Kerala-Tamil Nadu check-post
🎬 Watch Now: Feature Video

ತಮಿಳುನಾಡು: ತಮಿಳುನಾಡು-ಕೇರಳ ಗಡಿಭಾಗದ ಪರಸಲಾ ಕಲಿಯಿಕ್ಕವೈಲ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ವಿನ್ಸೆಂಟ್ (58) ಅವರಿಗೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಅಪರಿಚಿತರ ಗುಂಪೊಂದು ಗುಂಡು ಹಾರಿಸಿದೆ. ಘಟನೆ ನಡೆದಾಗ ಇಬ್ಬರು ಪೊಲೀಸರು ಮಾತ್ರ ಇದ್ದರು ಎನ್ನಲಾಗಿದೆ. ತಿರುವನಂತಪುರಂನಿಂದ ನಾಗಾರ್‌ಕೋಯಿಲ್ ಕಡೆಗೆ ಬರುತ್ತಿದ್ದ ಕಾರನ್ನು ಪರಿಶೀಲಿಸುತ್ತಿದ್ದಾಗ ಮುಖವಾಡ ಧರಿಸಿದ್ದ ಹಲ್ಲೆಕೋರರು ವಿನ್ಸೆಂಟ್ಹಣೆಗೆ, ಹೊಟ್ಟೆ ಮತ್ತು ಕಾಲಿಗೆ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಕನ್ಯಾಕುಮಾರಿ, ತಿರುನೆಲ್ವೇಲಿ, ತೆಂಕಶಿ ಸೇರಿದಂತೆ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗಿದೆ. ತಮಿಳುನಾಡಿನ ಪೊಲೀಸರ ತಂಡಗಳು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿವೆ