ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆ ಮೇಲೆ ಹರಿದ ಟಿಪ್ಪರ್: ವಿಡಿಯೋ ವೈರಲ್ - Tipper lorry accident news
🎬 Watch Now: Feature Video
ಮೆಡ್ಚಲ್ (ತೆಲಂಗಾಣ): ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಜಿಲ್ಲೆಯ ಕಪ್ರಾ ಸರ್ಕಲ್ ಬಳಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಹಿಳೆ 35 ವರ್ಷದ ಸರಿತಾ, ಎಪಿಐಸಿ ಕಾಲೋನಿಯ ನಿವಾಸಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಸ್ಕೂಟಿಯಲ್ಲಿ ತಮ್ಮ ಮನೆಗೆ ತೆರಳುತಿದ್ದ ವೇಳೆ ಟಿಪ್ಪರ್ ಲಾರಿ ಹಿಂದಿನಿಂದ ಅತಿ ವೇಗವಾಗಿ ಬಂದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಅಪಘಾತದ ವಿಡಿಯೋ ಲಭ್ಯವಾಗಿದ್ದು, ಭಯಾನಕ ದೃಶ್ಯ ಕಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
Last Updated : Nov 28, 2019, 10:48 AM IST