ಲಡಾಖ್ಗೆ ತೆರಳುತ್ತಿದ್ದ ಸೈನಿಕರಿಗೆ ಜೈಕಾರ ಕೂಗಿ ಬೆಂಬಲ ಸೂಚಿಸಿದ ಟಿಬೆಟಿಯನ್ ಸಮುದಾಯ! - ಟಿಬೆಟಿಯನ್ ಸಮುದಾಯ
🎬 Watch Now: Feature Video
ಶಿಮ್ಲಾ: ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉಲ್ಭಣಗೊಂಡಿದ್ದು, ಹೀಗಾಗಿ ಹೆಚ್ಚು ಹೆಚ್ಚು ಭಾರತೀಯ ಯೋಧರ ನಿಯೋಜನೆ ಮಾಡಲಾಗ್ತಿದೆ. ಇಂದು ಕೂಡ ಲಡಾಖ್ನತ್ತ ತೆರಳುತ್ತಿದ್ದ ಯೋಧರಿಗೆ ಟೆಬೆಟ್ ಸಮುದಾಯ ಜೈಕಾರ ಕೂಗಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಟಿಬೆಟಿಯನ್ ಸಮುದಾಯ ಸೇನಾ ವಾಹನಗಳ ಬಳಿ ತೆರಳಿ ಜಯಘೋಷ ಹಾಕಿದ್ದಾರೆ. ಇವರ ಆತ್ಮೀಯತೆಗೆ ಯೋಧರು ಪುಳಕಿತಗೊಂಡಿದ್ದಾರೆ.