ಮೂವರು ಪತ್ರಕರ್ತರನ್ನು ಥಳಿಸಿದ ಜಮ್ಮು ಕಾಶ್ಮೀರ ಪೊಲೀಸರು: ವಿಡಿಯೋ - ಉಪ-ವಿಭಾಗೀಯ ಪೊಲೀಸ್ ಅಧಿಕಾರಿ
🎬 Watch Now: Feature Video
ಪುಲ್ವಾಮಾ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್ ವೇಳೆ ಮೂವರು ಫೋಟೋ ಜರ್ನಲಿಸ್ಟ್‌ಗಳನ್ನು ಜಮ್ಮು - ಕಾಶ್ಮೀರ ಪೊಲೀಸರು ಥಳಿಸಿದ್ದಾರೆ. ಪುಲ್ವಾಮದ ಮಾರ್ವಾಲ್ ಗ್ರಾಮದ ಎನ್‌ಕೌಂಟರ್ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯಿಂದ ಥಳಿಸಲ್ಪಟ್ಟ ಪತ್ರಕರ್ತರಲ್ಲಿ ಒಬ್ಬರಾದ ಕಮ್ರಾನ್ ಯೂಸುಫ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, "ಕೆಲಸ ಮಾಡುತ್ತಿರುವಾಗ, ಪೊಲೀಸರು ಬಂದು ನಮ್ಮನ್ನು ಥಳಿಸಲು ಪ್ರಾರಂಭಿಸಿದರು. ಕಾಕಪೋರಾದ ಎಸ್‌ಡಿಪಿಒ (ಉಪ-ವಿಭಾಗೀಯ ಪೊಲೀಸ್ ಅಧಿಕಾರಿ) ಮತ್ತು ಅವರೊಂದಿಗೆ ಬಂದ ಇತರ ಸಿಬ್ಬಂದಿ ನನ್ನನ್ನು ಬೆನ್ನಟ್ಟಿದರು. ಜೊತೆಗೆ ಲಾಠಿಯಿಂದ ಹೊಡೆಯಲು ಪ್ರಾರಂಭಿಸಿದರು" ಎಂದು ಹೇಳಿದರು. ಘಟನೆಯ ವೈರಲ್ ವಿಡಿಯೋದಲ್ಲಿ, ಯೂಸುಫ್ ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಪೊಲೀಸ್ ಪಡೆಗಳ ಸಿಬ್ಬಂದಿ ಲಾಠಿ ಹೊಡೆಯುವುದನ್ನು ಕಾಣಬಹುದು.