ರಾಜಕೀಯ ಶಕ್ತಿ ಕೇಂದ್ರ ಸಂಸತ್ ಭವನ ನಿರ್ಮಾಣಕ್ಕೆ ಪ್ರೇರಣೆ ಶಿವ-ಯೋಗಿನಿ ಮಂದಿರ..! - ಯೋಗಿನಿ ಮಂದಿರ
🎬 Watch Now: Feature Video
ದೇಶದ ರಾಜಕೀಯ ಶಕ್ತಿಕೇಂದ್ರ ಸಂಸತ್ ಭವನ. ಬ್ರಿಟಿಷರ ಆಳ್ವಿಕೆಯ ಭಾರತ ಸ್ವತಂತ್ರ ಅಂಗೀಕಾರದಿಂದ ಹಿಡಿದು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಹಿಂದಕ್ಕೆ ತೆಗೆದುಕೊಳ್ಳುವಲ್ಲಿ ಇದೇ ಸಂಸತ್ ಭವನ ಸಾಕ್ಷಿ. ಇಂತಹ ನೂರಾರು ಐತಿಹಾಸಿಕ ಘಟನೆಗಳಿಗೆ ವೇದಿಕೆಯಾದ ದೇಶದ ಹೆಮ್ಮೆಯ ಸಂಸತ್ ಭವನದ ಕಟ್ಟಡದ ವಿನ್ಯಾಸಕ್ಕೆ ಪ್ರೇರಣೆ ಆಗಿದ್ದು ಒಂದು ಹಿಂದೂ ದೇವಾಲಯ ಎಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.