ETV Bharat / state

ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು: ಪೊಲೀಸ್, ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ 11,830 ಸಿಬ್ಬಂದಿಯಿಂದ ಭದ್ರತೆ - NEW YEAR CELEBRATION

ಹೊಸ ವರ್ಷಾಚರಣೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್​ ಇಲಾಖೆ ನಗರದೆಲ್ಲೆಡೆ ಭದ್ರತೆಯ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

Bengaluru City
ಬೆಂಗಳೂರು ನಗರ (ETV Bharat)
author img

By ETV Bharat Karnataka Team

Published : Dec 28, 2024, 3:57 PM IST

Updated : Dec 28, 2024, 5:57 PM IST

ಬೆಂಗಳೂರು: ನೂತನ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗುತ್ತಿದ್ದು, ಡಿಸೆಂಬರ್ 31ರ ರಾತ್ರಿ 1 ಗಂಟೆಯವರೆಗೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅನುಮತಿಯಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಅಹಿತಕರ‌ ಘಟನೆಗಳು ಸಂಭವಿಸದಂತೆ ಬೆಂಗಳೂರು‌ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಿವರಿಸಿದ್ದಾರೆ.

ಒಟ್ಟು 11830 ಜನ ಸಿಬ್ಬಂದಿಯಿಂದ‌ ಭದ್ರತೆ: ಒಟ್ಟು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ‌ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 44 ಜನ ಎಸಿಪಿಗಳು, 135 ಇನ್​ಸ್ಪೆಕ್ಟರ್ಸ್, 530 ಸಬ್ ಇನ್​ಸ್ಪೆಕ್ಟರ್ಸ್, 655 ಸಹಾಯಕ ಸಬ್ ಇನ್​ಸ್ಪೆಕ್ಟರ್ಸ್, 4833 ಕಾನ್​ಸ್ಟೇಬಲ್ಸ್, 1048 ಮಹಿಳಾ ಪೊಲೀಸ್ ಸಿಬ್ಬಂದಿ, 597 ಜನ ಮಫ್ತಿ ಸಿಬ್ಬಂದಿ, 3170 ಗೃಹರಕ್ಷಕ ದಳದ ಸಿಬ್ಬಂದಿ, 800 ಜನ ಸಿವಿಲ್ ಡಿಫೆನ್ಸ್‌ ಸಿಬ್ಬಂದಿ ಸೇರಿದಂತೆ 11830 ಜನ ಸಿಬ್ಬಂದಿ ನಗರದಾದ್ಯಂತ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಅದರ ಜೊತೆಗೆ 72 ಕೆಎಸ್‌ಆರ್​ಪಿ ಪೊಲೀಸ್ ತುಕಡಿಗಳನ್ನು ಹೆಚ್ಚುರಿಯಾಗಿ ಭದ್ರತೆಗೆ ನಿಯೋಜಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (ETV Bharat)

ಎಂ.ಜಿ.ರಸ್ತೆ - ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ 2,572 ಜನ ಪೊಲೀಸರ ಕಣ್ಗಾವಲು: ಇನ್ನು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚು ಜನ ಸೇರುವ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಐವರು ಡಿಸಿಪಿಗಳು, 18 ಎಸಿಪಿ, 41 ಜನ ಪೊಲೀಸ್ ಇನ್​ಸ್ಪೆಕ್ಟರ್ಸ್ ಸೇರಿದಂತೆ ಒಟ್ಟು 2,572 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ಅದೇ ರೀತಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ಕಬ್ಬನ್‌ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಫೀಟ್ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್‌ಗಳು, ಪಬ್‌ಗಳು, ಕ್ಲಬ್‌ಗಳು ಮುಂತಾದ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಬಂದೋಬಸ್ತ್ ಹೆಚ್ಚಿಸಲಾಗಿದೆ.

ಸಂಭ್ರಮಾಚರಣೆ ನಡೆಯುವ‌ ಇತರೆ ಪ್ರಮುಖ ಸ್ಥಳಗಳಾದ ಫೀನಿಕ್ಸ್ ಮಾಲ್, ಓರಾಯನ್ ಮಾಲ್, ಕೋರಮಂಗಲ, ಇಂದಿರಾನಗರ, ಮಾರತ್ ಹಳ್ಳಿ, ಹೆಚ್.ಆರ್.ಬಿ.ಆರ್ ಲೇಔಟ್, ಏರ್​ಪೋರ್ಟ್ ರಸ್ತೆ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 4 ಡಿಸಿಪಿ, 6 ಎಸಿಪಿಗಳು, 18 ಜನ ಇನ್​ಸ್ಪೆಕ್ಟ‌ರ್ಸ್ ಸೇರಿದಂತೆ 2,414 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಹಿಳೆಯರು, ಮಕ್ಕಳ ಸುರಕ್ಷತೆಗೆ‌ ಕ್ರಮ: ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯಿರುವ ಮಹಿಳಾ ಸುರಕ್ಷತಾ ಸ್ಥಳ (Women Safety Island) ನಿರ್ಮಿಸಲಾಗಿದ್ದು, ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಜೊತೆಗೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಕಿಯೋಸ್ಕ್​ಗಳನ್ನು (Police Kiosk) ತೆರೆದಿದ್ದು, ಮಕ್ಕಳು ಕಾಣೆಯಾದಲ್ಲಿ ಅಥವಾ ಯಾವುದೇ ರೀತಿಯ ಕಳವಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ.

ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಣ್ಣಾವಲು ಏರ್ಪಡಿಸಲು ಸಿಬ್ಬಂದಿಗೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ವೀಕ್ಷಣಾ ಗೋಪುರಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗೆ ಬೈನಾಕ್ಯುಲ‌ರ್ ಉಪಕರಣಗಳನ್ನು ಒದಗಿಸಲಾಗಿದೆ. 817 ಸಿಸಿಟಿವಿ ವೀಕ್ಷಣಾ ಘಟಕಗಳು‌ 63 ವೀಕ್ಷಣಾ ಗೋಪುರಗಳು, 114 ಮಹಿಳಾ ಸುರಕ್ಷತಾ ಸ್ಥಳ (Women Safety Island) 48 ಪೊಲೀಸ್ ಕಿಯೋಕ್ಸ್, 54 ಆರೋಗ್ಯ ಸೇವಾ ಸೆಂಟರ್‌ಗಳನ್ನು ನಿರ್ಮಿಸಲಾಗಿದೆ.

ಎಂ.ಜಿ.ರಸ್ತೆಯ ಮೆಟ್ರೋ ಪ್ರವೇಶಕ್ಕೆ ನಿರ್ಬಂಧ‌: ಕಳೆದ ವರ್ಷ ಸಂಭ್ರಮಾಚರಣೆಯನ್ನು ಮುಗಿಸಿ ಸಾರ್ವಜನಿಕರು ತೆರಳುವಾಗ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯಾಗಿ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿತ್ತು‌. ಇದರಿಂದ ಎಚ್ಚೆತ್ತಿರುವ ಪೊಲೀಸರು ಈ ವರ್ಷ ರಾತ್ರಿ 11 ಗಂಟೆಯಿಂದ 2 ಗಂಟೆಯವರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಿಂದ ನಿರ್ಗಮಿಸಲು ನಿಷೇಧ ವಿಧಿಸಿದ್ದಾರೆ. ವಿವಿಧ ಕಡೆಗಳಿಂದ ಬಂದಿಳಿಯಲು‌ ಮಾತ್ರ ಅವಕಾಶವಿರಲಿದ್ದು, ತೆರಳುವವರು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಬದಲಾಗಿ ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಗಳನ್ನು ಬಳಸಬಹುದಾಗಿದೆ.

ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಡಿಸೆಂಬರ್ 31ರಂದು ರಾತ್ರಿ ಡ್ರೋನ್ ಕ್ಯಾಮರಾಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಹಾಗೂ ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಮತ್ತು 16 ಪರಿಶೀಲನಾ ತಂಡಗಳಿಂದ ತಪಾಸಣೆ ಕೈಗೊಳ್ಳಲಾಗುತ್ತದೆ.

ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ರೇವ್ ಪಾರ್ಟಿಗಳು (ಡ್ರಗ್ಸ್ ಸರಬರಾಜು)ನ್ನ ನಿಯಂತ್ರಿಸುವ ದೃಷ್ಟಿಯಿಂದ ಡಿಸೆಂಬರ್ ಮೊದಲ ವಾರದಿಂದಲೇ ನಗರದಾದ್ಯಂತ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದ್ದು, 3 ಜನ ವಿದೇಶಿ ಡ್ರಗ್ಸ್ ಪೆಡ್ಲರ್ ಸೇರಿದಂತೆ 73 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಹಾಗೂ ಅವರ ವಶದಲ್ಲಿದ್ದ 25.20 ಕೋಟಿ‌ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡು 54 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕ್ಲಬ್‌, ಪಬ್‌ ಮತ್ತು ರೆಸ್ಟೋರೆಂಟ್‌ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರು ಮತ್ತು ಅತಿಥಿಗಳಿಗೆ ನಿಗದಿತ ಮಿತಿಯನ್ನು ಮೀರದಂತೆ ಪಾಸ್‌ಗಳನ್ನು ವಿತರಿಸುವಂತೆ ಮಾಲೀಕರಿಗೆ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಹೊಸ ವರ್ಷಾಚರಣೆಗಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮದ್ಯವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ.

ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ಡ್ರಗ್ಸ್ ಸರಬರಾಜು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾವುದಾದರೂ ವಾರಸುದಾರರು ಇಲ್ಲದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸರು ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಮಾಹಿತಿ ನೀಡಲು ಕೋರಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸೂಚನೆಗಳು

Last Updated : Dec 28, 2024, 5:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.