ಲಂಕಾ ಅಧ್ಯಕ್ಷರ ಹೊಸ ಹೆಜ್ಜೆ.. ಬಂಧಿತ ಭಾರತೀಯ ಮೀನುಗಾರರ ಬಿಡುಗಡೆಗೆ ಅಸ್ತು!
🎬 Watch Now: Feature Video
ಚೀನಾ ಪರ ಒಲವು ಹೊಂದಿರುವ ಹೊಸ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಸಂಬಂಧ ಗಟ್ಟಿ ಮಾಡಿಕೊಳ್ಳುವಲ್ಲಿ ಭಾರತ ಮುಂದಾಗಿದೆ. ನೂತನ ಅಧ್ಯಕ್ಷರಾಗುತ್ತಿದ್ದಂತೆ ವಿದೇಶಾಂಗ ಸಚಿವರ ಮೂಲಕ ರಾಜತಾಂತ್ರಿಕ ಸಂಬಂಧ ಬಾಣ ಬಿಟ್ಟ ಮೋದಿ, ಹೊಸತರಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ನೋಡಿಕೊಂಡಿದ್ದಾರೆ. ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಉತ್ತಮಗೊಳಿಸುವ ಭಾರತದ ವಿದೇಶಾಂಗ ನೀತಿಯಂತೆ ಮೋದಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಜೈಶಂಕರ್ ಅವರ ಲಂಕಾ ಭೇಟಿ ಫಲವಾಗಿ ಸಿಂಹಳದ ನೂತನ ಅಧ್ಯಕ್ಷರು ಪ್ರಥಮ ಬಾರಿಗೆ ಭಾರತ ಭೇಟಿ ನೀಡಿದ್ದಾರೆ. ಪ್ರಧಾನಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾ ವಶದಲ್ಲಿರುವ ಭಾರತೀಯ ಮೀನುಗಾರರು ಹಾಗೂ ಅವರ ದೋಣಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ರಾಜಪಕ್ಸೆ ಇದೇ ವೇಳೆ ಭರವಸೆ ನೀಡಿದರು.