ದೀಪಗಳ ಹಬ್ಬ.. ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ - ವಿಶ್ವ ಪ್ರಸಿದ್ಧ ಜ್ಯೋತಿರ್ಲಿಂಗ ಮಹಾಕಳೇಶ್ವರ ದೇವಾಲಯ
🎬 Watch Now: Feature Video

ಉಜ್ಜಯಿನಿ/ಮಧ್ಯಪ್ರದೇಶ : ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವ ಪ್ರಸಿದ್ಧ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಾಲಯದಲ್ಲಿ ಧಂತೇರಸ್ ಆರಾಧನೆಯ ನಂತರ ದೀಪಾವಳಿ ಹಬ್ಬ ಆಚರಣೆ ಪ್ರಾರಂಭವಾಗಿದೆ. ಸಂಪ್ರದಾಯದ ಪ್ರಕಾರ, ಭಾಸ್ಮತಿಯ ನಂತರ ಬಾಬಾ ಮಹಾಕಾಳೇಶ್ವರನನ್ನು ಬಿಸಿನೀರಿನಲ್ಲಿ ಸ್ವಚ್ಛಗೊಳಿಸಲಾಯಿತು. ನಂತರ ಜೇನುತುಪ್ಪ, ತುಪ್ಪ, ಹಾಲು, ಮೊಸರು, ಮಲ್ಲಿಗೆ ಎಣ್ಣೆ, ಅರಿಶಿನ, ಶ್ರೀಗಂಧ, ಕುಂಕುಮ, ವಿವಿಧ ಬಗೆಯ ಹೂವುಗಳು ಮತ್ತು ಹಣ್ಣಿನ ರಸವನ್ನು ಹೊಂದಿರುವ ಸುವಾಸನಾಭರಿತ ದ್ರವಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ಬಾಬಾ ಮಹಾಕಾಳೇಶ್ವರನನ್ನು ಶೃಂಗಾರಗೊಳಿಸಿ, ಪೂಜೆ ಕೈಗೊಂಡರು. ದರ್ಶನ ಪಡೆಯಲು ಸಹಸ್ರ ಸಂಖ್ಯೆಯಲ್ಲಿ ಭಕ್ತಗಣ ಆಗಮಿಸುತ್ತಿದೆ.