ಪೆಟ್ರೋಲ್ ಪಂಪ್ ಕಾರ್ಮಿಕನ ಮಗನಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ‍್ಯಾಂಕ್ - ಪ್ರದೀಪ್ ಸಿಂಗ್ 26ನೇ ರ‍್ಯಾಂಕ್
🎬 Watch Now: Feature Video
ಇಂದೋರ್ (ಮಧ್ಯಪ್ರದೇಶ): ಪೆಟ್ರೋಲ್ ಪಂಪ್ ಕಾರ್ಮಿಕನ ಮಗ 2019 ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ. ಪ್ರದೀಪ್ ಸಿಂಗ್ 26ನೇ ರ‍್ಯಾಂಕ್ ಗಳಿಸಿ ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ. ಕಳೆದ ವರ್ಷ ನಾನು 93 ನೇ ರ‍್ಯಾಂಕ್ ಪಡೆದಿದ್ದೆ. ಒಂದು ರ‍್ಯಾಂಕ್ ವ್ಯತ್ಯಾಸದಿಂದಾಗಿ ಭಾರತೀಯ ಆಡಳಿತ ಸೇವೆಗೆ ಸೇರಲು ಸಾಧ್ಯವಾಗಲಿಲ್ಲ. ಇದು ಹೊಸ ಪ್ರಯಾಣದ ಪ್ರಾರಂಭವಾಗಿದೆ ಎಂದು ಪ್ರದೀಪ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.