ಮಾವನನ್ನು ಕೊಡಲಿಯಿಂದ ಕೊಚ್ಚಿ ಹಾಕಿದ ಮನೆ ಅಳಿಯ! ವಿಡಿಯೋ.. - ಕಾಮಾರೆಡ್ಡಿ ಮಾವ ಕೊಲೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5253950-179-5253950-1575363825098.jpg)
ಮಗ ಇಲ್ಲ ಎಂಬ ಕಾರಣಕ್ಕೆ ಮಗಳನ್ನು ಕೊಟ್ಟು ಅಳಿಯನನ್ನೇ ಮನೆತನಕ್ಕೆ ಮಾವ ಕರೆತಂದಿದ್ದ. ಆದ್ರೆ ಆ ಮನೆ ಅಳಿಯನೇ ಮಾವನ ಪಾಲಿಗೆ ಯಮನಾಗಿದ್ದಾನೆ. ಹೌದು, ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಲಿಂಗಾಪುರ್ ನಿವಾಸಿ ಎನಗುರ್ತಿ ರಾಜಲಿಂಗನಿಗೆ ಒಬ್ಬಳೇ ಮಗಳು ಭೀಮವ್ವ. ಮಗನಿಲ್ಲ ಎಂಬ ಕಾರಣಕ್ಕೆ ಮಗಳು ಭೀಮವ್ವಳನ್ನು ಲಿಂಗಂಪೇಟ ತಾಲೂಕಿನ ಐಲಪೂರ್ ಗ್ರಾಮದ ಲಕ್ಷ್ಮಣ್ನಿಗೆ ಕೊಟ್ಟು ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದರು ರಾಜಲಿಂಗ. ಸೋಮವಾರ ರಾತ್ರಿ ಬೈಕ್ ಸಂಬಂಧ ಮಾವ ಮತ್ತು ಅಳಿಯನ ಮಧ್ಯೆ ಜಗಳವಾಗಿದೆ. ಬಳಿಕ ಜಗಳ ಶಾಂತವಾಗಿದ್ದು, ಮಗಳು ಭೀಮವ್ವ ಪಕ್ಕದ ಮನೆ ಪಕ್ಕದಲ್ಲಿ ನಡೆಯುತ್ತಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮಣ್ ಮನೆಯಲ್ಲಿರುವ ಕೊಡಲಿ ತೆಗೆದುಕೊಂಡು ಮಾವ ರಾಜಲಿಂಗರ ತಲೆಗೆ ಹೊಡೆದು ಕೊಚ್ಚಿ ಹಾಕಿದ್ದು, ರಾಜಲಿಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.
Last Updated : Dec 3, 2019, 5:16 PM IST