ಶಿವನ ದರ್ಶನಕ್ಕೆ ಬಂದ ಹಾವು.. ರಾತ್ರಿ ವೇಳೆ ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ! - ಮಧ್ಯಪ್ರದೇಶದಲ್ಲಿ ಶಿವಲಿಂಗದ ಸುತ್ತಲೂ ಹಾವು ಪ್ರದಕ್ಷಿಣೆ
🎬 Watch Now: Feature Video
ಛತ್ತರಪುರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಜಟಾಶಂಕರ ಧಾಮವನ್ನ ಬುಂದೇಲ್ಖಂಡದ ಕೇದಾರನಾಥ್ ಎಂದು ಕರೆಯಲಾಗುತ್ತಿದೆ. ಈ ಶಿವಧಾಮದಲ್ಲಿ ಮೇಲಿಂದ ಮೇಲೆ ಪವಾಡಗಳು ನಡೆಯುತ್ತಲೇ ಇರುತ್ತವೆ. ಅಂತಹ ಮತ್ತೊಂದು ಘಟನೆ ಇದೀಗ ಬೆಳಕಿಗೆ ಬಂದಿದೆ. ತಡರಾತ್ರಿ ದೇವಸ್ಥಾನಕ್ಕೆ ಆಗಮಿಸಿರುವ ಹಾವೊಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶಿವಲಿಂಗದ ಸುತ್ತಲೂ ಹಾವು ಅನೇಕ ಸಲ ಪ್ರದಕ್ಷಿಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟ್ರಸ್ಟ್ನ ಅಧೀಕ್ಷಕ ಜೆ.ಪಿ ಖರೆ, ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುವ ದಿನ ಈ ಸರ್ಪ ಇಲ್ಲಿಗೆ ಬರುತ್ತದೆ. ಇಲ್ಲಿಯವರೆಗೂ ಯಾರಿಗೂ ಕೂಡ ಅಪಾಯ ಮಾಡಿಲ್ಲ ಎಂದಿದ್ದಾರೆ.