ಇದೆಂಥ ಕೌತುಕ... ಕೋಳಿ ಮೊಟ್ಟೆಯಲ್ಲಿ ಪತ್ತೆಯಾಯ್ತು ಹಾವಿನ ಮರಿ! ವಿಡಿಯೋ - ಕಾಂಚೀಪುರಂನಲ್ಲಿ ಕೋಳಿ ಮೊಟ್ಟೆಯಲ್ಲಿ ಹಾವಿನ ಮರಿ ಪತ್ತೆ,
🎬 Watch Now: Feature Video
ತಮಿಳುನಾಡಿನ ಕಾಂಚೀಪುರಂನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಕೋಳಿ ಮೊಟ್ಟೆಯಿಂದ ಹಾವಿನ ಮರಿ ಹೊರಬರುವುದನ್ನು ನೋಡಿ ಅಲ್ಲಿನ ಜನ ಶಾಕ್ ಆಗಿದ್ದಾರೆ. ಕಾಂಚೀಪುರಂನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಮೇಘನಾಥನ್ ಮನೆಗೆ ಊಟಕ್ಕೆ ಬಂದಿದ್ದರು. ಊಟದಲ್ಲಿ ಮೇಘನಾಥ್ ಆಮ್ಲೆಟ್ ಹಾಕಿಕೊಂಡು ಬರುವಂತೆ ಅವರ ಪತ್ನಿಗೆ ಹೇಳಿದ್ದಾನೆ. ಈ ವೇಳೆ ಮೊಟ್ಟೆ ಒಡೆದು ಆಮ್ಲೇಟ್ ಹಾಕುತ್ತಿರುವಾಗ ಹಾವಿನ ಮರಿವೊಂದು ಕಂಡಿದೆ. ಮೊಟ್ಟೆಯಲ್ಲಿ ಹಾವಿನ ಮರಿ ಕಂಡು ಭಯಭೀತರಾದ ಮೇಘನಾಥ್ ತನ್ನ ಸುತ್ತಮುತ್ತಲಿನವರನ್ನು ಕರೆದರು. ಈ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದ ನೆರೆಹೊರೆಯವರು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟರು. ಈ ವಿಡಿಯೋ ನೋಡಿದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.