ಬಾಬ್ರಿ ಮಸೀದಿ ಧ್ವಂಸವಾಗದಿದ್ರೆ ನಾವು ರಾಮ ಮಂದಿರ ಭೂಮಿ ಪೂಜೆ ನೋಡ್ತಿರಲಿಲ್ಲ : ರಾವತ್​​ - Babri Masjid Demolition Verdict news

🎬 Watch Now: Feature Video

thumbnail

By

Published : Sep 30, 2020, 3:34 PM IST

ಮುಂಬೈ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ನಾಯಕರು ತಮ್ಮದೇ ಅಭಿಪ್ರಾಯ ಹೊರ ಹಾಕಿದ್ದಾರೆ. ಇದೀಗ ಶಿವಸೇನೆ ಮುಖ್ಯಸ್ಥ ಸಂಜಯ್​ ರಾವತ್​ ಕೂಡ ಮಾತನಾಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪಿತೂರಿ ಅಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆ ಪ್ರಸಂಗವನ್ನು ನಾವು ಮರೆಯಬೇಕು. ಬಾಬ್ರಿ ಮಸೀದಿ ನೆಲ ಸಮವಾಗದಿದ್ದರೆ ಇಂದು ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಜತೆಗೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಉಮಾ ಭಾರತಿ ಹಾಗೂ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಶಿವಸೇನೆ ಈ ತೀರ್ಪನ್ನು ಸ್ವಾಗತಿಸಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.