ಕಾಲುವೆಗೆ ಬಿದ್ದ ಶಾಲಾ ಬಸ್, 10 ಮಕ್ಕಳಿಗೆ ಗಾಯ - ಅಪಾಯದಿಂದ ಪಾರು: VIDEO - ಉತ್ತರ ಪ್ರದೇಶ ಕಾಲುವೆಗೆ ಬಿದ್ದ ಶಾಲಾ ಬಸ್

🎬 Watch Now: Feature Video

thumbnail

By

Published : Jan 11, 2020, 1:28 PM IST

ಖುಷಿನಗರ್​(ಉತ್ತರ ಪ್ರದೇಶ) : ಶಾಲಾ ಬಸ್​ ಕಾಲುವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ ಹತ್ತು ಮಕ್ಕಳು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಖುಷಿನಗರದಲ್ಲಿ ನಡೆದಿದೆ. ಬಸ್​ನಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಮಂಜು ತುಂಬಿಕೊಂಡ ಪರಿಣಾಮ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದೇ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಧಿಕಾರಿ ಡಾ. ಅನಿಲ್ ಕುಮಾರ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.