ತಾಯಿಯ ಅಗಲಿಕೆ: ರೈಲು ಹಳಿ ಮೇಲೆ ಮಲಗಿ ಸಾಯಲು ಹೊರಟ ವ್ಯಕ್ತಿಯ ರಕ್ಷಣೆ - virar railway station
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಿರಾರ್ ರೈಲ್ವೆ ನಿಲ್ದಾಣದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ರೈಲು ಬರುವ ವೇಳೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಸಿಬ್ಬಂದಿ ಆತನನ್ನು ರಕ್ಷಿಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ತಾಯಿ ಮೃತಪಟ್ಟಿದ್ದಕ್ಕೆ ನೊಂದ ವ್ಯಕ್ತಿ ಈ ನಿರ್ಧಾರಕ್ಕೆ ಬಂದಿದ್ದನು ಎಂದು ಹೇಳಲಾಗಿದೆ.