Ind vs Aus: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ನಾಳೆ ಪಂದ್ಯದ ಫಲಿತಾಂಶ ಹೊರ ಬೀಳಲಿದೆ.
ರಣರೋಚಕತೆಯಿಂದ ಕೂಡಿರುವ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಅಲ್ಪಮೊತ್ತದ ಹಿನ್ನಡೆ ಸಾಧಿಸಿತ್ತು. ಅಲ್ಲದೇ, ಪಂದ್ಯದ ನಾಲ್ಕನೇ ದಿನವಾದ ಇಂದು ಹೇಗಾದ್ರು ಮಾಡಿ ಕಾಂಗರೂ ಪಡೆಯ ಎಲ್ಲ ವಿಕೆಟ್ಗಳನ್ನು ಉರುಳಿಸಿ ಅಲ್ಪಮೊತ್ತಕ್ಕೆ ನಿರ್ಬಂಧಿಸಬೇಕು. ಜತೆಗೆ 5ನೇ ದಿನದಂದು ಸಂಪೂರ್ಣವಾಗಿ ಬ್ಯಾಟ್ ಮಾಡಿ ಆಸೀಸ್ ನೀಡಿದ್ದ ಗುರಿಯನ್ನ ತಲುಪಬೇಕು ಎಂದು ಭಾರತ ಯೋಜನೆ ರೂಪಿಸಿತ್ತು. ಆದರೆ ಭಾರತದ ಪ್ಲಾನ್ ವಿಫಲವಾಗಿದೆ.
#INDvsAUSTest
— VS (@vstechsolution) December 29, 2024
Bumrah claimed the final wicket, and KL Rahul made a spectacular catch with his legs, but in the end, it turned out to be a no-ball. ☹️ pic.twitter.com/YHcO29MN2O
ನಾಲ್ಕನೇ ದಿನವಾದ ಇಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕೇವಲ 173ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್ 10ನೇ ವಿಕೆಟ್‌ಗೆ ಜೊತೆಯಾಗಿ ಅಜೇಯವಾಗಿ 55 ರನ್‌ಗಳ ಜೊತೆಯಾಟವಾಡಿ 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್‌ಗಳು ಪರದಾಡಿದರು. ಅದರಲ್ಲೂ ಜಸ್ಪ್ರೀತ್ ಬುಮ್ರಾ ಎಸೆದ ನಾಲ್ಕನೇ ದಿನದ ಕೊನೆಯ ಓವರ್‌ನಲ್ಲಿ ನಾಥನ್ ಲಿಯಾನ್ ಸ್ಲಿಪ್‌ನಲ್ಲಿದ್ದ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಇದನ್ನು ಕಾಲಿನ ಸಹಾಯದಿಂದ ಕ್ಯಾಚ್ ಪಡೆದಿದ್ದರು. ಕೊನೆಗೂ ವಿಕೆಟ್ ಸಿಕ್ಕಿತು ಎಂದು ಟೀಂ ಇಂಡಿಯಾ ಆಟಗಾರರು ನಿಟ್ಟುಸಿರು ಬಿಟ್ಟು ಸಂಭ್ರಮಿಸಿದ್ದರು. ಆದರೆ ಅಂಪೈರ್ ಇದನ್ನೂ ನೋಬಾಲ್ ಎಂದು ತೀರ್ಪು ನೀಡಿದರು.
ಅದು ನೋ ಬಾಲ್ ಎಂದು ತಿಳಿದ ಜಸ್ಪ್ರೀತ್ ಬುಮ್ರಾ ನಿರಾಸೆಯಿಂದ ಬೌಲಿಂಗ್‌ಗೆ ಮರಳಿದರು. ಇದಾದ ನಂತರ ಅವರು ಮೂರು ಎಸೆತಗಳನ್ನು ಎಸೆದರು. ಆದರೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 9 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದೆ. ಇದರೊಂದಿಗೆ ಐದನೇ ದಿನದಾಟದಲ್ಲಿ ಆಸೀಸ್ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಸಂಕಷ್ಟಕ್ಕೆ ಸಿಲುಕಿದ ಭಾರತ; ಬುಮ್ರಾ ಮತ್ತು ಸಿರಾಜ್ ನೀಡಿದ ವರದಾನದಿಂದಾಗಿ ಆಸ್ಟ್ರೇಲಿಯಾ 300ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಹೌದು, ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 179 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ವೇಳೆ, ನಥಾನ ಲಿಯಾನ್ ಬ್ಯಾಟಿಂಗ್ ಮಾಡುತ್ತಿದ್ದರು. ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಸಿರಾಜ್ ಎಸೆದ ಬೌಲ್ ಅನ್ನು ಸ್ಟ್ರೇಟ್ ಡ್ರೈವ್ ಆಡಲು ಯತ್ನಿಸಿದ ಲಿಯಾನ್ ಸಿರಾಜ್ಗೆ ಕ್ಯಾಚಿ ನೀಡಿದ್ದರು. ಆದರೆ ಅದನ್ನು ಹಿಡಿಯುವಲ್ಲಿ ಸಿರಾಜ್ ವಿಫಲರಾದರು. ಇದಲ್ಲದೇ ಬುಮ್ರಾ 4ನೇ ದಿನದಾಟ ಕೊನೆಯ ಓವರ್‌ನಲ್ಲಿ ನೋಬಾಲ್ ಮಾಡಿದ್ದರಿಂದ ಲಿಯಾನ್ಗೆ ಮತ್ತೊಂದು ವರದಾನ ಸಿಕ್ಕಿತು.
ಇದೀಗ ಪಂದ್ಯವನ್ನು ಡ್ರಾ ಮಾಡುವ ಗುರಿಯನ್ನು ಹೊಂದಿರುವ ಆಸ್ಟ್ರೇಲಿಯಾ 5ನೇ ದಿನವೂ ಎಷ್ಟು ಸಾಧ್ಯವೋ ಅಷ್ಟು ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದೆ. ಅಲ್ಲದೇ ಈಗಾಗಲೇ 333 ರನ್ಗಳೊಂದಿಗೆ ಲೀಡ್ ಪಡೆದುಕೊಂಡಿದೆ. ಒಂದು ವೇಳೆ ಈ ಪಂದ್ಯ ಡ್ರಾ ಆದರೇ ಭಾರತದ WTC ಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ.
ಇದನ್ನೂ ಓದಿ: ಪಾಕ್ ಮಣಿಸಿ WTC ಫೈನಲ್ ಪ್ರವೇಶಿಸಿದ ದ.ಆಫ್ರಿಕಾ: ಭಾರತಕ್ಕೆ ಮಹಾ ಸಂಕಷ್ಟ, ಹೀಗಾದ್ರೆ ಮಾತ್ರ ಫೈನಲ್ಗೆ!