ETV Bharat / state

ಸಿದ್ದರಾಮಯ್ಯನವರ ಸರ್ಕಾರ ಸೇಡಿನ ರಾಜಕಾರಣ ಮಾಡ್ತಿದೆ: ಜಗದೀಶ್ ಶೆಟ್ಟರ್ - JAGADISH SHETTAR

ರಾಜ್ಯದಲ್ಲಿ ಅರಾಜಕಥೆ ಸೃಷ್ಟಿಯಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.

ಸಂಸದ ಜಗದೀಶ್ ಶೆಟ್ಟರ್
ಸಂಸದ ಜಗದೀಶ್ ಶೆಟ್ಟರ್ (ETV Bharat)
author img

By ETV Bharat Karnataka Team

Published : Dec 29, 2024, 8:57 PM IST

ದಾವಣಗೆರೆ: ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊನ್ನೆ ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಎಸ್​ಡಿಎ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಸಾಯುವ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಹೆಸರು ಬರೆದಿಟ್ಟಿದ್ದ. ಆದರೂ ಅವರ ಪಿಎ ಬಂಧನ ಆಗದೆ ಬೇಲ್ ಪಡೆದು ಆಚೆ ಓಡಾಡುತ್ತಿದ್ದಾರೆ. ಈಗ ಕಲಬುರಗಿಯಲ್ಲಿ ಪ್ರಿಯಾಂಕ್​ ಖರ್ಗೆ ಪಿಎ ಒತ್ತಡದಿಂದ ಗುತ್ತೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯಾಂಕ್ ಖರ್ಗೆ ಪಿಎ ಸೇರಿ ಅನೇಕ ಶಾಸಕರ ಒತ್ತಡ ಇದೆ ಅಂತ ಡೆತ್​ನೋಟ್ ಬರೆದಿಟ್ಟರೂ ಎಫ್​ಐಆರ್ ಮಾಡಿಲ್ಲ" ಎಂದು ಕಿಡಿಕಾರಿದರು.

ಸಂಸದ ಜಗದೀಶ್ ಶೆಟ್ಟರ್ (ETV Bharat)

"ನಾವೆಲ್ಲ ಹೋರಾಟ ಮಾಡಿದ ಬಳಿಕ ಕೋರ್ಟ್​ನಿಂದ ಡೈರೆಕ್ಷನ್ ಬಂದ ಮೇಲೆ ಎಫ್​ಐಆರ್ ದಾಖಲು ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಅರಾಜಕಥೆ ಸೃಷ್ಟಿಯಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ" ಎಂದು ಟೀಕಿಸಿದರು.

"ಸಿದ್ದರಾಮಯ್ಯನವರ ಸರ್ಕಾರ ಸೇಡಿನ ರಾಜಕಾರಣ ಮಾಡ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ಹೊರ ಬರುತ್ತಿದ್ದಂತೆ ಬಿಜೆಪಿಯವರ ಮೇಲೆ ಕೇಸ್ ದಾಖಲಿಸಲಾಗ್ತಿದೆ. ನೂರಾರು ಕೋಟಿಯ ಹಗರಣ ಹೊರ ಬರುತ್ತಿದ್ದಂತೆ ಬಿಜೆಪಿಯವರನ್ನು ಅರೆಸ್ಟ್ ಮಾಡಲಾಗ್ತಿದೆ. ನ್ಯಾಯಾಂಗ ತನಿಖೆಯ ಮಧ್ಯಂತರ ವರದಿ ತರಿಸುವುದು, ಕೇಸ್ ಹಾಕುವುದು, ಎಸ್​ಐಟಿ ತನಿಖೆ ಮಾಡಿಸಲಾಗುತ್ತಿದೆ" ಎಂದು ಅವರು ದೂರಿದರು.

ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶಿಸಲಿ: ಆರ್. ಅಶೋಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.