ಹಾಸನ: ವ್ಯಕ್ತಿಯೊಬ್ಬ ರಾತ್ರಿ ವೇಳೆ ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಒಳಉಡುಪು ಕದ್ದು ಅಸಭ್ಯವಾಗಿ ಬಳಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ಕಲ್ಲಪ್ಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಯಸಳೂರಿನ ಜಗದೀಶ್ ಎಂಬಾತನಿಂದ ಈ ವಿಕೃತ ಕೃತ್ಯ ನಡೆದಿದೆ. ಸದ್ಯ ಜಗದೀಶ್‌ನನ್ನ ಯಸಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಗದೀಶ್ ಒಂಟಿ ಮಹಿಳೆಯರಿರುವ ಮನೆಗೆ ರಾತ್ರಿ ವೇಳೆ ನುಗ್ಗಿ ಒಳ ಉಡುಪುಗಳನ್ನು ಕದಿಯುತ್ತಿದ್ದ. ಬಟ್ಟೆಗಳು ಕಳ್ಳತನ ಆಗುತ್ತಿದ್ದುದನ್ನು ಗಮನಿಸಿದ ಮಹಿಳೆಯೊಬ್ಬರು ಮನೆ ಎದುರು ಸಿಸಿಟಿವಿ ಕ್ಯಾಮರಾ ಹಾಕಿಸಿದ್ದರು. ಆನಂತರ ಜಗದೀಶ್ನ ಕಳ್ಳಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೊದಲು ಮನೆಗೆ ಬಂದ ಆತ ಮನೆಯ ಮುಂದೆ ಒಗೆದು ಹಾಕಿದ್ದ ಮಹಿಳೆಯ ಒಳ ಉಡುಪು ತೆಗೆದುಕೊಂಡು ತನ್ನ ಪ್ಯಾಟ್ನ ಒಳಗೆ ಹಾಕಿಕೊಂಡಿದ್ದಾನೆ. ನಂತರ ಮತ್ತೊಂದು ಬಟ್ಟೆಯನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದು, ಅದು ಒಣಗಿಲ್ಲದ ಕಾರಣ ಅಲ್ಲೇ ಬಿಟ್ಟು ಹೋಗಿದ್ದಾನೆ. ಈ ಸಂಬಂಧ ಪೊಲೀಸರು ಜಗದೀಶ್ನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಹಾಸನ : ಕಟಾವಿಗೆ ಬಂದ ಭತ್ತ ನಾಶಪಡಿಸಿದ ಕಾಡಾನೆಗಳು, ಚನ್ನರಾಯಪಟ್ಟಣದಲ್ಲಿ ಚಿರತೆ ಸೆರೆ