ಅವಸರವೇ ಅಪಾಯಕ್ಕೆ ಕಾರಣ: ಆರ್ಪಿಎಫ್ ಸಿಬ್ಬಂದಿಯಿಂದ ಉಳಿಯಿತು ಮಹಿಳೆಯ ಪ್ರಾಣ - ರೈಲ್ವೆ ಭದ್ರತಾ ಪಡೆ
🎬 Watch Now: Feature Video
ದೌಸಾ (ರಾಜಸ್ಥಾನ): ಅಪಾಯವೆಂದು ತಿಳಿದರೂ ಕೂಡ ಜನರು ಆತುರಪಟ್ಟು ಚಲಿಸುತ್ತಿರುವ ರೈಲು ಹತ್ತುವ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ರಾಜಸ್ಥಾನದ ದೌಸಾ ರೈಲ್ವೆ ನಿಲ್ದಾಣದಲ್ಲಿ ಇಂತಹ ಮತ್ತೊಂದು ಘಟನೆ ನಡೆದಿದೆ. ಕುಟುಂಬವೊಂದರ ನಾಲ್ವರು ಸದಸ್ಯರು ನಿಲ್ದಾಣಕ್ಕೆ ಬಂದಿದ್ದು, ಚಲಿಸುತ್ತಿರುವ ರೈಲು ಹತ್ತಲು ಮುಂದಾಗಿದ್ದಾರೆ. ಇವರಲ್ಲಿ ಇಬ್ಬರು ರೈಲು ಹತ್ತಿದ್ದು, ಮಹಿಳೆ ಕಾಲು ಜಾರಿ ಬಿದ್ದು, ಬಿದ್ದು ರೈಲಿನಡಿ ಸಿಲುಕಿದ್ದಾರೆ. ಇದನ್ನು ನೋಡಿದ ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಸಿಬ್ಬಂದಿಯು ಆಕೆಯನ್ನು ರಕ್ಷಿಸಿದ್ದಾರೆ.