ವಿಭಿನ್ನವಾಗಿರಲಿದೆ ಸಂಜೆ 7ಕ್ಕೆ ಪ್ರಧಾನಿ ನಡೆಸುವ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ - ಇಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಪ್ರಧಾನಿ ಪರೀಕ್ಷಾ ಪೇ ಚರ್ಚಾ
🎬 Watch Now: Feature Video
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 7 ಗಂಟೆಗೆ 'ಪರೀಕ್ಷಾ ಪೇ ಚರ್ಚೆ' ನಡೆಸಲಿದ್ದು ಕಾರ್ಯಕ್ರಮ ವಿನೂತನವಾಗಿರಲಿದೆ. ಈ ಬಗ್ಗೆ ಪ್ರಧಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಕೊರೊನಾದಿಂದಾಗಿ ಈ ಬಾರಿಯ ಚರ್ಚೆ ವರ್ಚುವಲ್ ಆಗಿರಲಿದೆ. ಹೊಸ ಸ್ವರೂಪ, ವ್ಯಾಪಕ ವಿಷಯಗಳ ಕುರಿತು ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಪಿಎಂ ಸಂವಾದ ನಡೆಸುತ್ತಾರೆ. ಈ ಬಾರಿ ವಿದಾರ್ಥಿಗಳನ್ನೂ ಮೋದಿ, ಪರೀಕ್ಷಾ ವಾರಿಯರ್ ಎಂದು ಕರೆದಿದ್ದು ವಿಶೇಷ. ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ಬಾರಿ ಚರ್ಚೆಯಲ್ಲಿ ಭಾಗವಹಿಸಲು ಪಾಲಕರು, ಶಿಕ್ಷಕರಿಗೂ ಅವಕಾಶ ನೀಡಲಾಗಿದೆ.