ಬೆಳಗಾವಿಯ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ: ಪ್ರಹ್ಲಾದ್ ಜೋಶಿ
🎬 Watch Now: Feature Video
ನವದೆಹಲಿ: ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ವಿಫಲರಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಗಡಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು, ಮರಾಠಿ ಭಾಷಿಕರು ಸಹೋದರರಂತೆ ಇದ್ದಾರೆ. ಆದರೆ ಇದನ್ನು ಹಾಳು ಮಾಡಲು ಉದ್ಧವ್ ಠಾಕ್ರೆ ಯತ್ನಿಸುತ್ತಿದ್ದು, ಸಿಎಂ ಆಗಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಬೆಳಗಾವಿಯ ಒಂದಿಚೂ ಭಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.